ADVERTISEMENT

ಖಾಸಗಿ ವಾಹನಗಳ ಮೊರೆ ಹೋದ ಜನ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 13:52 IST
Last Updated 7 ಏಪ್ರಿಲ್ 2021, 13:52 IST
ತಾವರಗೇರಾ ಪಟ್ಟಣಲ್ಲಿ ಪ್ರಯಾಣಿಕರು ಖಾಸಗಿ ವಾಹನಗಳಲ್ಲಿ ಪ್ರಯಾಣಿಸಿದರು
ತಾವರಗೇರಾ ಪಟ್ಟಣಲ್ಲಿ ಪ್ರಯಾಣಿಕರು ಖಾಸಗಿ ವಾಹನಗಳಲ್ಲಿ ಪ್ರಯಾಣಿಸಿದರು   

ತಾವರಗೇರಾ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಬುಧವಾರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ ಕಾರಣ ಪಟ್ಟಣದ ಬಸ್‌ ನಿಲ್ದಾಣ ಜನರಿಲ್ಲದೆ ಬಿಕೋ ಎನ್ನುತ್ತಿತ್ತು.

ಜನ ದುಪ್ಪಟ್ಟು ದರ ನೀಡಿ ಖಾಸಗಿ ವಾಹನಗಳಲ್ಲಿ ಪ್ರಯಾಣಿಸಿದರು.

ತಾವರಗೇರಾ ಪಟ್ಟಣದಿಂದ ಮುದಗಲ್‌, ಲಿಂಗಸುಗೂರು, ಸಿಂಧನೂರು, ಮಸ್ಕಿ, ಕುಷ್ಟಗಿ, ಗಂಗಾವತಿ, ಕನಕಗಿರಿ ಸೇರಿ ವಿವಿಧ ಕಡೆ ಪ್ರಯಾಣಿಕರು ಖಾಸಗಿ ವಾಹನಗಳಲ್ಲಿ ತೆರಳಿದರು.

ADVERTISEMENT

ಮುಷ್ಕರದ ಕುರಿತು ಮಾಹಿತಿ ಇಲ್ಲದ ಕಾರಣ ಗ್ರಾಮೀಣ ಭಾಗದ ಜನ ಪರದಾಡಿದರು.

ಬಸ್ ನಿಲ್ದಾಣದಲ್ಲಿ ಅಂಗಡಿ–ಮುಂಗಟ್ಟುಗಳ ಕಡೆ ಗ್ರಾಹಕರು ಸುಳಿಯಲಿಲ್ಲ.

‘ವ್ಯಾಪಾರ ಎಂದಿನಂತಿಲ್ಲದ ಕಾರಣ ನಷ್ಟವಾಗಿದೆ’ ಎಂದು ವ್ಯಾಪಾರಿ ಲಕ್ಷ್ಮಣಗೌಡ ಪುಂಡಗೌಡ್ರು ತಿಳಿಸಿದರು.

‘ನಾವು ಬಂದ್ ಕಾರಣ ದರ ಹೆಚ್ಚಳ ಮಾಡುವುದಿಲ್ಲ. ಸಾಮಾನ್ಯ ದಿನಗಳಲ್ಲಿ ಇದ್ದ ದರವನ್ನೇ ಪಡೆಯುತಿದ್ದೇವೆ’ ಎಂದು ಖಾಸಗಿ ವಾಹನ ಚಾಲಕ ವಿರೇಶ ಮನ್ನಾಪೂರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.