ADVERTISEMENT

ಸಚಿವರಿಂದ ವಾಲ್ಮೀಕಿ ಭವನ ಕಾಮಗಾರಿ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 14:36 IST
Last Updated 10 ಜೂನ್ 2019, 14:36 IST
ಕೊಪ್ಪಳದಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ವಾಲ್ಮೀಕಿ ಭವನದ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಇ.ತುಕಾರಾಂ ವೀಕ್ಷಿಸಿದರು. ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಸಮಾಜದ ಅಧ್ಯಕ್ಷ ಟಿ.ರತ್ನಾಕರ ಇದ್ದರು
ಕೊಪ್ಪಳದಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ವಾಲ್ಮೀಕಿ ಭವನದ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಇ.ತುಕಾರಾಂ ವೀಕ್ಷಿಸಿದರು. ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಸಮಾಜದ ಅಧ್ಯಕ್ಷ ಟಿ.ರತ್ನಾಕರ ಇದ್ದರು   

ಕೊಪ್ಪಳ: ನಗರದ ಕಿನ್ನಾಳ ರಸ್ತೆಯ ಅಗಡಿ ಬಡಾವಣೆಯಲ್ಲಿರುವ ವಾಲ್ಮೀಕಿ ಸಮುದಾಯ ಭವನದ ಕಟ್ಟಡ ನಡೆಯುವ ಸ್ಥಳಕ್ಕೆಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ, ವೈದ್ಯಕೀಯ ಶಿಕ್ಷಣ ಸಚಿವ ಇ.ತುಕಾರಾಂ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.

ಶಾಸಕ, ಸಂಸದೀಯ ಕಾರ್ಯದರ್ಶಿ ಕೆ.ರಾಘವೇಂದ್ರ ಹಿಟ್ನಾಳ್ ಸಚಿವರಿಗೆ ಮಾಹಿತಿ ನೀಡಿ, ಶಾಸಕರ ಅನುದಾನದಲ್ಲಿಅಂದಾಜು ₹ 49 ಲಕ್ಷ ಹಣದಲ್ಲಿ ಸುಮಾರು 110 ಅಡಿ ಅಗಲ, 208 ಅಡಿ ಉದ್ದ ಜಾಗದಲ್ಲಿ ನಿರ್ಮಾಣ ಮಾಡುತ್ತಿರುವ ಸುಮಾರು ₹ 3.50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದು, ₹ 1.50 ಕೋಟಿ ಹಣ ಬಿಡುಗಡೆ ಆಗಿದ್ದು, ಬಾಕಿ ₹2 ಕೋಟಿ ರೂಪಾಯಿ ಹಣ ಬಿಡುಗಡೆಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಸಮಾಜದ ಪರವಾಗಿ ಈ ವೇಳೆ ಸಚಿವರನ್ನು ಸನ್ಮಾನಿಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಮತ್ತು ಶೇ 7.5 ಮೀಸಲಾತಿ ನೀಡುವ ಕುರಿತು ಸಂಪುಟದಲ್ಲಿ ಚರ್ಚಿಸುವಂತೆ ಮನವಿ ಸಲ್ಲಿಸಿದರು.

ADVERTISEMENT

'ಸಮಾಜದ ಪ್ರತಿಯೊಬ್ಬರೂ ಭವನವನ್ನು ಮುತುವರ್ಜಿ ವಹಿಸಿ ಉತ್ತಮವಾಗಿನಿರ್ಮಿಸಲು ಸಹಕರಿಸಬೇಕು.ನಂತರ ಅದನ್ನು ಸಮುದಾಯ ಮತ್ತು ಸಮಾಜಕ್ಕೆ ಒಳ್ಳೆಯ ರೀತಿಯ ಉಪಯೋಗವಾಗುವಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲಾ ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಟಿ. ರತ್ನಾಕರ, ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ರಾಮಣ್ಣ ಕಲ್ಲನವರ, ವಾಲ್ಮೀಕಿ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಡೊಣ್ಣಿ, ತಾಲೂಕು ಮಹಾಸಭಾ ಅಧ್ಯಕ್ಷ ಶರಣಪ್ಪ ನಾಯಕ್, ಹನುಮಂತಪ್ಪ ಗುದಗಿ, ಶಿವಮೂರ್ತಿ ಗುತ್ತೂರು, ಮಂಜುನಾಥ್ ಜಿ. ಗೊಂಡಬಾಳ, ಯಮನೂರಪ್ಪ ನಾಯಕ್, ಅನುಸೂಯಾ ವಾಲ್ಮೀಕಿ, ಉಮೇಶ್ ವಾಲ್ಮೀಕಿ, ನೀಲಪ್ಪ ಬಾವಿಕಟ್ಟಿ, ವಿರುಪಾಕ್ಷಪ್ಪ, ಮಾರ್ಕಂಡಪ್ಪ ಕಲ್ಲನವರ್, ನಾಗರಾಜ ಕಿಡದಾಳ್, ಮಲ್ಲಪ್ಪ ಬೇಲೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.