ADVERTISEMENT

ಅಳವಂಡಿ: ಮೇಲ್ದರ್ಜೆಗೆ ಏರದ ಪಶು ಆಸ್ಪತ್ರೆ

ಎರಡು ದಶಕ ಕಳೆದರೂ ಕಾಯಂ ಪಶು ವೈದ್ಯರಿಲ್ಲ

ಜುನಸಾಬ ವಡ್ಡಟ್ಟಿ
Published 7 ಮಾರ್ಚ್ 2022, 10:50 IST
Last Updated 7 ಮಾರ್ಚ್ 2022, 10:50 IST
ಅಳವಂಡಿಯ ಪಶು ಆಸ್ಪತ್ರೆಯ ಹೋರನೋಟ.
ಅಳವಂಡಿಯ ಪಶು ಆಸ್ಪತ್ರೆಯ ಹೋರನೋಟ.   

ಅಳವಂಡಿ: ಗ್ರಾಮದ ಪಶುಚಿಕಿತ್ಸಾಲಯಕ್ಕೆ ಸರಿ ಸುಮಾರು ಎರಡು ದಶಕ ಕಳೆದರೂಕಾಯಂ ವೈದ್ಯರು ಇಲ್ಲದ ಕಾರಣ ಜಾನುವಾರುಗಳ ಚಿಕಿತ್ಸೆಗಾಗಿ ಗ್ರಾಮಸ್ಥರು ಪರಡಾಡುವ ಪರಿಸ್ಥಿತಿ ಉಂಟಾಗಿದೆ. ಜಾನುವಾರುಗಳಿಗೆ ಸಂಜೀವಿನಿ ಆಗಬೇಕಿದ್ದ ಇಲ್ಲಿನ ಪಶು ಆಸ್ಪತ್ರೆ ತೀವ್ರ ನಿರ್ಲಕ್ಷಕ್ಕೆ ಒಳಗಾಗಿದೆ.

ಅಳವಂಡಿ ಹೋಬಳಿ ಕೇಂದ್ರವಾಗಿದ್ದು ಇಲ್ಲಿನ ಪಶು ಚಿಕಿತ್ಸಾ ಕೇಂದ್ರಕ್ಕೆ 2003ರಲ್ಲಿ ಆರಂಭವಾಗಿದ್ದರೂ ಕಾಯಂ ವೈದ್ಯರೇ ಇಲ್ಲದ ಕಾರಣ ಜಾನುವಾರು, ಕೋಳಿ, ಕುರಿ, ನಾಯಿ ಮುಂತಾದ ಪ್ರಾಣಿಗಳಿಗೆ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲದಿರುವುದರಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಸಹಾಯಕ ಪಶು ನಿರ್ದೇಶಕ ಸೇರಿ ನಾಲ್ಕು ಜನ ಕಾರ್ಯ ನಿರ್ವಹಿಸಬೇಕಾದ ಈ ಆಸ್ಪತ್ರೆಯಲ್ಲಿ ಕೇವಲ ಒಬ್ಬ ಜಾನುವಾರು ಅಧಿಕಾರಿ ಮತ್ತು ಒಬ್ಬ ಡಿ ದರ್ಜೆ ನೌಕರ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಳವಂಡಿ ಪಶು ಚಿಕಿತ್ಸಾಲಯಕ್ಕೆ ಸಹಾಯಕ ಪಶು ನಿರ್ದೇಶಕರ ನೇಮಕವಾಗಬೇಕಿದೆ. ಈ ಹುದ್ದೆಗೆ ನೇಮಕವಾಗಬೇಕಾದರೆ ಮುಖ್ಯ ಪಶು ವೈದ್ಯಾಧಿಕಾರಿಗಳು13 ವರ್ಷ ಸೇವೆ ಸಲ್ಲಿಸಿರಬೇಕು. ನಂತರ ಇವರು ಪಶು ನಿರ್ದೇಶಕರಾಗಲಿದ್ದಾರೆ.13 ವರ್ಷ ಸೇವೆ ಸಲ್ಲಿಸಿದ ವೈದ್ಯಾಧಿಕಾರಿಬ ಲಭ್ಯತೆ ಇಲ್ಲದೇ ಇರುವುದರಿಂದ ಈ ಹುದ್ದೆ ಖಾಲಿ ಉಳಿದಿವೆ.

ADVERTISEMENT

ಸಹಾಯಕ ಪಶು ನಿರ್ದೆಶಕರ ನೇಮಕವಾಗಬೇಕಿದೆ. ಆದರೆ ಈವೈದ್ಯರ ಲಬ್ಯತೆ ಇಲ್ಲದೇ ಇರುವದರಿಂದ ಕೊಪ್ಪಳ ಹೊರತು ಪಡಿಸಿ ಉಳಿದ ಹೋಬಳಿ ಮಟ್ಟದ ಆಸ್ಪತ್ರೆಗಳಲ್ಲಿ ಕಳೆದ ಸುಮಾರು15 ರಿಂದ20 ವರ್ಷಗಳಿಂದಪ್ರಭಾರ ವೈದ್ಯರ ಮೇಲೆ ಆಸ್ಪತ್ರೆ ನಡೆಯುತ್ತಿವೆ.

ತಾಲ್ಲೂಕಿನಲ್ಲಿ ಒಟ್ಟು ವೈದ್ಯಾಧಿಕಾರಿಗಳ ಮಂಜೂರಾದ ಹುದ್ದೆಗಳು-20 ಇವೆ. ಆದರೆ ಸದ್ಯ ಕಾರ್ಯ ನಿರ್ವಹಿಸುತ್ತಿರುವವರು ಕೇವಲ6 ಜನ ಮಾತ್ರ. 14 ವೈಧ್ಯರ ಕೊರತೆ ಇದೆ. ಈ ಆರು ಜನ ವ್ಯೆದ್ಯಾದಿಕಾರಿಗಳು ಪ್ರಭಾರಿಯಾಗಿ19 ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಒಟ್ಟಾರೆಯಾಗಿ ಸುಮಾರು70 ರಷ್ಟು ಹುದ್ದೆಗಳ ಕೊರತೆ ಇದೆ. ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆದೀನ ಸಿಬ್ಬಂದಿ ಒಟ್ಟು ಮಂಜೂರಾದ ಹುದ್ದೆಗಳು28 ಆದರೆ ಕಾರ್ಯ ನಿರ್ವಹಿಸುತ್ತಿರುವವರು11 ಜನ ಮಾತ್ರ ಸುಮಾರು ಶೇ 60ರಷ್ಟು ಹುದ್ದೆಗಳ ಕೊರತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.