ಕುಷ್ಟಗಿ: ತಾಲ್ಲೂಕು ಮಟ್ಟದಲ್ಲಿ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸೆ.17 ರಂದು ವಿಶ್ವಕರ್ಮ ಜಯಂತಿ ಆಚರಿಸಲಾಗುತ್ತದೆ ಎಂದು ವಿಶ್ವಕರ್ಮ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಗುರಪ್ಪ ಬಡಿಗೇರ ಹಾಗೂ ಕಾರ್ಯದರ್ಶಿ ಶರಣಪ್ಪ ಬಡಿಗೇರ ಹೇಳಿದರು.
ಸರ್ಕಾರದ ವತಿಯಿಂದ ತಹಶೀಲ್ದಾರ್ ಕಚೇರಿಯಲ್ಲಿ ಬೆಳಿಗ್ಗೆ 8 ಗಂಟೆಗೆ ಹಾಗೂ ತಾಲ್ಲೂಕಿನ ಎಲ್ಲ ಶಾಲಾ–ಕಾಲೇಜು, ಸರ್ಕಾರಿ ಮತ್ತು ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿಯೂ ಜಯಂತಿ ಆಚರಿಸಲಾಗುತ್ತದೆ. ನಂತರ ಮಧ್ಯಾಹ್ನ 12.30ಕ್ಕೆ ಶಾಖಾಪುರ ರಸ್ತೆಯಲ್ಲಿರುವ ಕಾಳಿಕಾದೇವಿ ದೇವಸ್ಥಾನದ ಬಳಿ ವಿಶ್ವಕರ್ಮ ಸಮುದಾಯದ ತಾಲ್ಲೂಕು ಹಾಗೂ ನಗರ ಘಟಕದ ವತಿಯಿಂದ ಧ್ವಜಾರೋಹಣ ಮತ್ತು ವಿಶ್ವಕರ್ಮ ಮಹೋತ್ಸವ (ಜಯಂತಿ) ನಡೆಯಲಿದೆ .ಸಮಾಜದ ಎಲ್ಲರೂ ಭಾಗವಹಿಸಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.