ADVERTISEMENT

ಕನಕಗರಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 15:08 IST
Last Updated 20 ಅಕ್ಟೋಬರ್ 2021, 15:08 IST
ಕನಕಗಿರಿಯಲ್ಲಿ ಬುಧವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಮೆರವಣಿಗೆಯಲ್ಲಿ ಕುಂಭ, ಕಳಸ ಹೊತ್ತು ಮಹಿಳೆಯರು ಭಾಗವಹಿಸಿದ್ದರು
ಕನಕಗಿರಿಯಲ್ಲಿ ಬುಧವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಮೆರವಣಿಗೆಯಲ್ಲಿ ಕುಂಭ, ಕಳಸ ಹೊತ್ತು ಮಹಿಳೆಯರು ಭಾಗವಹಿಸಿದ್ದರು   

ಕನಕಗಿರಿ: ಮಹರ್ಷಿ ವಾಲ್ಮೀಕಿ ಜಯಂತಿ ಆಚರಣಾ ಸಮಿತಿ ಹಾಗೂ ತಾಲ್ಲೂಕು ವಾಲ್ಮೀಕಿ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಬುಧವಾರ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಲ್ಮಠದ ಮುಂದೆ ನಡೆದ ವಾಲ್ಮೀಕಿ ಭಾವಚಿತ್ರ ಹಾಗೂ ಸ್ತಬ್ದಚಿತ್ರಗಳ ಮೆರವಣಿಗೆಗೆ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಡಾ. ಚನ್ನಮಲ್ಲಸ್ವಾಮಿ ಚಾಲನೆ ನೀಡಿದರು.

ಬೆಳಿಗ್ಗೆ ಕನಕಾಚಲಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಕುಂಕಮಾರ್ಚನೆ, ಮಂಗಳಾರುತಿ, ಗುಜ್ಜಲ ವಂಶದ ನಾಯಕರ ಮೂರ್ತಿಗಳಿಗೆ ವಿಶೇಷ ಪೂಜೆ, ಅಲಂಕಾರ ಕಾರ್ಯಕ್ರಮಗಳು ಶ್ರದ್ಧಾ, ಭಕ್ತಿಯಿಂದ ನಡೆದವು.

ADVERTISEMENT

ಕಲ್ಮಠದಿಂದ ಆರಂಭವಾದ ಮೆರವಣಿಗೆ ರಾಜಬೀದಿ, ಎಪಿಎಂಸಿ ಮಳಿಗೆ ರಸ್ತೆ , ವಾಲ್ಮೀಕಿ ವೃತ್ತ, ನವಲಿ ರಸ್ತೆ ಮೂಲಕ ನಾಗಪ್ಪನ ಕಟ್ಟೆ ವರಗೆ ನಡೆಯಿತು. ಸುಮಂಗಲೆ ಮಹಿಳೆಯರು ಕಳಸ, ಕನ್ನಡಿ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಭಾಜಾ, ಭಜಂತ್ರಿ, ಡೊಳ್ಳು ಕುಣಿತ, ತಾಷ ಮೇಳ, ಮಹಿಳೆಯರ ಡೊಳ್ಳು, ವೇಷಗಾರರ ಕುಣಿತ, ಹಾಗೂ ಗೊಂಬೆಗಳ ಕುಣಿತ ಕಾರ್ಯಕ್ರಮಕ್ಕೆ ಮೆರಗು ತಂದವು.
ಮಹರ್ಷಿ ವಾಲ್ಮೀಕಿ ಸಮಾಜದ ಧಾರ್ಮಿಕ, ಸಾಮಾಜಿಕ ಕ್ಷೇತ್ರದ ಮಹಾನ್ ನಾಯಕರ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳು, ಕುದುರೆ ಏರಿದ ಮದಕರಿ ನಾಯಕನ ಚಿತ್ರ ಕಣ್ಮನ ಸೆಳೆದವು.

ವಾಲ್ಮೀಕಿ ಅವರ ಭಾವಚಿತ್ರವನ್ನು ಸಾರೋಟದಲ್ಲಿಟ್ಟು ಮೆರವಣಿಗೆ ನಡೆಸಲಾಯಿತು.

ಸಮಾಜದ ಗುರುಗಳಾದ ರಾಜಾ ನವೀನಚಂದ್ರ ನಾಯಕ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಹನುಮೇಶ ನಾಯಕ, ವೀರೇಶ ಸಮಗಂಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಗಂಗಾಧರಸ್ವಾಮಿ, ದಲ್ಲಾಲಿ ವರ್ತಕರ ಸಂಘದ ಅಧ್ಯಕ್ಷ ಮಹಾಂತೇಶ ಸಜ್ಜನ್, ಕೆಡಿಪಿ ಸದಸ್ಯ ಗುರುನಗೌಡ, ಮಹರ್ಷಿ ವಾಲ್ಮೀಕಿ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಗ್ಯಾನಪ್ಪ ಗಾಣದಾಳ, ವಾಲ್ಮೀಕಿ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಶರಣಪ್ಪ ಸೋಮಸಾಗರ, ನಗರ ಘಟಕದ ಅಧ್ಯಕ್ಷ ನಾಗೇಶಪ್ಪ ಮಲ್ಲಾಪುರ, ಗೌರವಾಧ್ಯಕ್ಷ ರಂಗಪ್ಪ ಕೊರಗಟಗಿ, ಎಪಿಎಂಸಿ ಮಾಜಿ ಸದಸ್ಯ ಈಶಪ್ಪ ಹೊಸ್ಗೇರಾ, ತಾಪಂ ಮಾಜಿ ಉಪಾಧ್ಯಕ್ಷ ಕನಕಪ್ಪ ತಳವಾರ, ಮಾಜಿ ಸದಸ್ಯ ನಾಗಪ್ಪ ಚಿಂಚಲಿ, ಪ್ರಮುಖರಾದ ರಾಮನಗೌಡ ಬುನ್ನಟ್ಟಿ, ಹುಲಿಗೆಮ್ಮ ನಾಯಕ, ಸಂಗಪ್ಪ ರಾಮದುರ್ಗಾ, ಶರತ್ ನಾಯಕ, ನರಸಪ್ಪ ಪೂಜಾರ, ಬೆಟ್ಟಪ್ಪ ಜೀರಾಳ, ಸಣ್ಣ ಸಿದ್ದೇಶ್ವರ, ಅಶ್ವಿನಿ ದೇಸಾಯಿ, ಶೇಖರಗೌಡ ಸೋಮಸಾಗರ, ಮುದಿಯಪ್ಪ ಖ್ಯಾಡೆದ, ಪಂಪಾಪತಿ ತರ್ಲಕಟ್ಟಿ, ನಿಂಗಪ್ಪ ನವಲಿ, ಕಾಳಪ್ಪ ಪೂಜಾರ, ವಿಶ್ವನಾಥ ಬಸರಿಹಾಳ, ಮಾರುತಿ ಮಲ್ಲಾಪುರ, ನಾಗರಾಜ ಇದ್ಲಾಪುರ, ಬಸವರಾಜ ಜೀರಾಳ ಸೇರಿದಂತೆ ಸಮಾಜದ ಮುಖಂಡರು, ಮಹಿಳೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.