ADVERTISEMENT

ವನ್ಯಜೀವಿಗಳಿಗೆ ಕುಡಿವ ನೀರು ಸೌಲಭ್ಯ: ಅರಣ್ಯ ಇಲಾಖೆ ಸಿಬ್ಬಂದಿ ಕ್ರಮ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 12:43 IST
Last Updated 18 ಡಿಸೆಂಬರ್ 2018, 12:43 IST
ಯಲಬುರ್ಗಾ ತಾಲ್ಲೂಕು ಮಕ್ಕಳ್ಳಿ ಹೊರವಲಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹೊಂಡಕ್ಕೆ ನೀರು ತುಂಬಿಸಿದರು
ಯಲಬುರ್ಗಾ ತಾಲ್ಲೂಕು ಮಕ್ಕಳ್ಳಿ ಹೊರವಲಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹೊಂಡಕ್ಕೆ ನೀರು ತುಂಬಿಸಿದರು   

ಯಲಬುರ್ಗಾ: ತಾಲ್ಲೂಕಿನ ಮಕ್ಕಳಿ ಮತ್ತು ಮಂಡಲಮರಿ ಪ್ರದೇಶ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿನ ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಕಾಡದಿರಲಿಯೆಂದು ಅರಣ್ಯ ಇಲಾಖೆ ಸಿಬ್ಬಂದಿ ಹೊಂಡಗಳಲ್ಲಿ ನೀರು ತುಂಬಿಸಲು ಕ್ರಮ ಕೈಗೊಂಡಿದ್ದಾರೆ.

‘ಅರಣ್ಯದಲ್ಲಿ ನೀರು ಸಿಗದ ಕಾರಣ ವನ್ಯಜೀವಿಗಳು ದಾಹ ನೀಗಿಸಿಕೊಳ್ಳಲು ಊರು ಮತ್ತು ತೋಟಕ್ಕೆ ಬರುತ್ತಿವೆ. ಅವುಗಳಿಗೆ ತೊಂದರೆಯಾಗಬಾರದು ಮತ್ತು ಜನರಿಗೂ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಹೊಂಡ ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ಭರ್ತಿ ಮಾಡುತ್ತಿದ್ದೇವೆ‘ ಎಂದು ಯಲಬುರ್ಗಾ ಉಪ ವಲಯ ಅರಣ್ಯಾಧಿಕಾರಿ ಅಂದಪ್ಪ ಕುರಿ ತಿಳಿಸಿದರು.

ಅರಣ್ಯದಲ್ಲಿ ತೋಳ, ನರಿ, ಮೊಲ, ನವಿಲು ಸೇರಿದಂತೆ ವಿವಿಧ ಪ್ರಾಣಿಪಕ್ಷಿಗಳಿವೆ. ಸಂಗನಾಳ, ಕಲ್ಲೂರು ಮಲ್ಕಸಮುದ್ರ ಪ್ರದೇಶದಲ್ಲಿ ಜಿಂಕೆಗಳು ಸಾಕಷ್ಟು ಪ್ರಮಾಣದಲ್ಲಿವೆ. ಅವುಗಳ ರಕ್ಷಣೆಗಾಗಿ ಕೈಗೊಂಡಿರುವ ವಿವಿಧ ಕ್ರಮಗಳನ್ನು ಕೈಗೊಂಡಿದ್ದೇವೆ‘ ಯಲಬುರ್ಗಾ ಉಪ ವಲಯ ಅರಣ್ಯಾಧಿಕಾರಿ ಅಂದಪ್ಪ ಕುರಿ ತಿಳಿಸಿದರು. ಅರಣ್ಯ ರಕ್ಷಕ ಶರೀಫ ಕೊತ್ವಾಲ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.