ಕೊಪ್ಪಳ: ‘ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಲು ಸರಸ್ ಅಂತಹ ಮೇಳಗಳು ಒಳ್ಳೆಯ ಅವಕಾಶಗಳು ನೀಡುತ್ತವೆ’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಇಲ್ಲಿನ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಭಾನುವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಸರಸ್ ಮೇಳ ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಸ್ವಸಹಾಯ ಗುಂಪು ಗಳಿಂದ 30 ಸ್ಟಾಲ್‌ಗಳನ್ನು ಹಾಕಲಾ ಗಿತ್ತು. ಮಹಿಳೆಯರು ತಯಾರಿಸಿದ ಕಾಟನ್ ಸೀರೆಗಳು, ಮಕ್ಕಳ ಬಟ್ಟೆಗಳು, ಸ್ಯಾನಿಟರಿ ಪ್ಯಾಡ್, ಅಗರಬತ್ತಿ, ಕೈಚೀಲ, ಗೃಹ ಅಲಂಕಾರಿಕೆ ವಸ್ತುಗಳು, ಆಯುರ್ವೇದ ಮತ್ತು ಅಲಂಕಾರಿಕ ಸಸ್ಯಗಳು, ಸಿಹಿ ತಿನಿಸುಗಳು, ಉಪ್ಪಿನಕಾಯಿ, ಜೋಳದ ರೊಟ್ಟಿ, ವಿವಿಧ ಪುಡಿಗಳು, ಶೇಂಗಾ, ಹೋಳಿಗೆ ತಿನಿಸುಗಳು ಪ್ರದರ್ಶನ ಮಾಡಲಾಗಿತ್ತು.
ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ನಗರಸಭೆ ಅಧ್ಯಕ್ಷೆ ಲತಾ ಗವಿಸಿದ್ದಪ್ಪ ಚಿನ್ನೂರ, ಡಾ.ಎನ್. ಮಂಜುಳಾ, ಪ್ರಿಯಾಂಕ ಮೇರಿ ಫ್ರಾನ್ಸಿಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.