ADVERTISEMENT

ಮುನಿರಾಬಾದ್ | ರಾಘವೇಂದ್ರ ಸ್ವಾಮಿಗಳ ಆರಾಧನೆ, ರಥೋತ್ಸವ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 7:35 IST
Last Updated 13 ಆಗಸ್ಟ್ 2025, 7:35 IST
ಮುನಿರಾಬಾದ್ ನ ಕೈಗಾರಿಕಾ ಪ್ರದೇಶದ ರಾಘವೇಂದ್ರ ರಾಯರ ಮಠದಲ್ಲಿ ಮಂಗಳವಾರ ಉತ್ತರಾರಾಧನೆ ಅಂಗವಾಗಿ ಮಹಾರಥೋತ್ಸವ ನಡೆಯಿತು
ಮುನಿರಾಬಾದ್ ನ ಕೈಗಾರಿಕಾ ಪ್ರದೇಶದ ರಾಘವೇಂದ್ರ ರಾಯರ ಮಠದಲ್ಲಿ ಮಂಗಳವಾರ ಉತ್ತರಾರಾಧನೆ ಅಂಗವಾಗಿ ಮಹಾರಥೋತ್ಸವ ನಡೆಯಿತು   

ಮುನಿರಾಬಾದ್: ಇಲ್ಲಿನ ಕೈಗಾರಿಕಾ ಪ್ರದೇಶದ (ಎಸ್‌ಜೆಸ್‌ ಕಾಲೊನಿ) ರಾಘವೇಂದ್ರ ಸ್ವಾಮಿ ಮಠದಲ್ಲಿ ಆರಾಧನಾ ಮಹೋತ್ಸವದ ಅಂಗವಾಗಿ ಮಂಗಳವಾರ ನಡೆದ ಉತ್ತರಾರಾಧನೆ, ರಥೋತ್ಸವದೊಂದಿಗೆ ಸಂಪನ್ನವಾಯಿತು.

ಮಂಗಳವಾರ ಬೆಳಿಗ್ಗೆ ಸುಪ್ರಭಾತ, ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ಮಹಾ ಮಂಗಳಾರತಿ ನಡೆಯಿತು. ನಂತರ ಕನಕಾಭಿಷೇಕ, ತೊಟ್ಟಿಲು ಪೂಜೆ, ನೈವೇದ್ಯ ಸಮರ್ಪಣೆ ನಡೆಯಿತು. ವಾದ್ಯ ಮೇಳ, ಸ್ಥಳೀಯ ಪಾಂಡುರಂಗ ಭಜನಾ ಮಂಡಳಿ ಮತ್ತು ಮಹಿಳಾ ಮಂಡಳಿಯ ಭಜನೆಯೊಂದಿಗೆ ದೇವಸ್ಥಾನ ಪ್ರಾಂಗಣದಲ್ಲಿ ಮಹಾರಥೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಪ್ರವಚನ, ಸೇವಾಕರ್ತರು ಮತ್ತು ದಾನಿಗಳ ಸನ್ಮಾನ, ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು. ಹುಲಿಗಿ, ಮುನಿರಾಬಾದ್, ಹೊಸಹಳ್ಳಿ, ಹಿಟ್ನಾಳ ಸೇರಿದಂತೆ ಸುತ್ತಲಿನ ಗ್ರಾಮದ ಭಕ್ತರು ಪಾಲ್ಗೊಂಡರು

ಶನಿವಾರ ಧ್ವಜಾರೋಹಣ, ಪಂಚರಾತ್ರೋತ್ಸವ. ಭಾನುವಾರ ಪೂರ್ವಾರಾಧನೆ ಹಾಗೂ ಸೋಮವಾರ ಮಧ್ಯಾರಾಧನೆ ಅಂಗವಾಗಿ ಆಂಜನೇಯ ಸ್ವಾಮಿ ಮತ್ತು ರಾಯರ ಬೃಂದಾವನಕ್ಕೆ ವಿಶೇಷ ಪೂಜೆ, ಅಲಂಕಾರ, ಮಂಗಳಾರತಿ ನಡೆಯಿತು.

ADVERTISEMENT
ಮುನಿರಾಬಾದ್ ನ ಕೈಗಾರಿಕಾ ಪ್ರದೇಶದ ರಾಘವೇಂದ್ರ ರಾಯರ ಮಠದಲ್ಲಿ ಮಂಗಳವಾರ ಉತ್ತರಾರಾಧನೆ ಅಂಗವಾಗಿ ಮಹಾರಥೋತ್ಸವ ನಡೆಯಿತು
ರಾಘವೇಂದ್ರ ಸ್ವಾಮಿಗಳ ಅಲಂಕೃತ ಬೃಂದಾವನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.