ADVERTISEMENT

ಅರಕನಹಳ್ಳಿ ಗ್ರಾಮಸ್ಥರಿಂದ ಸೆಸ್ಕ್ ಕಚೇರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 10:15 IST
Last Updated 1 ಅಕ್ಟೋಬರ್ 2011, 10:15 IST

ಮದ್ದೂರು: ಟ್ರಾನ್ಸ್‌ಫಾರ‌್ಮರ್ ದುರಸ್ತಿಗೆ ಆಗ್ರಹಿಸಿ ಶುಕ್ರವಾರ ತಾಲ್ಲೂಕಿನ ಅರಕನಹಳ್ಳಿ ಗ್ರಾಮಸ್ಥರು ಕೆಸ್ತೂರು ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕಳೆದ 5ತಿಂಗಳಿಂದ ಟ್ರಾನ್ಸ್‌ಫಾರ‌್ಮರ್ ಕೆಟ್ಟು, ಕುಡಿಯುವ ನೀರು ಸೇರಿದಂತೆ ರೈತರ ಪಂಪ್‌ಸೆಟ್‌ಗಳಿಗೆ ತೊಂದರೆ ಯಾಗಿದೆ. ರೈತರ ಬೆಳೆಗಳು ಒಣಗುತ್ತಿವೆ. ಈಗಾಗಲೇ ಸೆಸ್ಕ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ ಗ್ರಾಮಸ್ಥರು ಒಂದು ಗಂಟೆಗೂ ಹೆಚ್ಚು ಕಾಲ ಸೆಸ್ಕ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸೆಸ್ಕ್ ಎಇಇ ಮಂಜುನಾಥ್ ಉದ್ರಿಕ್ತ  ಗ್ರಾಮಸ್ಥರನ್ನು ಸಮಾಧಾನಪಡಿಸಿದರು. ಇನ್ನೆರಡು ದಿನದೊಳಗೆ ಹೊಸ ಟ್ರಾನ್ಸ್‌ಫಾರ‌್ಮರ್ ಅಳವಡಿಸುವ ಮೂಲಕ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.

ಗ್ರಾಪಂ ಸದಸ್ಯರಾದ ಗಂಗರಾಜು, ಗೋವಿಂದ, ಮುಖಂಡ ರಾದ ನಾಗರಾಜು, ದಾಸೇಗೌಡ, ಪೂಜಾರಿ ಹೊನ್ನಯ್ಯ ಇದ್ದರು.

ತ್ಯಾಗರಾಜು ಎಂಪಿಸಿಎಸ್ ಅಧ್ಯಕ್ಷ
ಚಾಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ 2ನೇ ಅವಧಿಗೆ ಎಚ್.ಜೆ.ತ್ಯಾಗರಾಜು ಶುಕ್ರವಾರ ಅವಿರೋಧವಾಗಿ     ಆಯ್ಕೆ ಆಗಿದ್ದಾರೆ.

ಹಿಂದಿನ ಅಧ್ಯಕ್ಷ ಸಿ.ಪಿ.ಶೇಖರ್ ರಾಜೀನಾ ಮೆಯಿಂದ ಅಧ್ಯಕ್ಷ ಸ್ಥಾನ ತೆರವಾಗಿದ್ದ ಹಿನ್ನೆಲೆಯಲ್ಲಿ ಚುನಾವಣೆ ನಡೆದಿತ್ತು. ನಿರ್ದೇಶ ಕರಾದ ಎಂ.ಮರೀಗೌಡ, ಮಹದೇವಮ್ಮ, ರವಿಕುಮಾರ್, ಕೆಂಪರಾಜು, ಎಂ.ರಾಮೇಗೌಡ, ಕಾರ್ಯದರ್ಶಿ ಶ್ರೀನಿವಾಸ್ ಅವರುಗಳು ಹಾಜರಿದ್ದು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.