ADVERTISEMENT

ಆಕಸ್ಮಿಕ ಬೆಂಕಿ: 50 ಎಕರೆ ಅರಣ್ಯ ನಾಶ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2011, 6:50 IST
Last Updated 6 ಮಾರ್ಚ್ 2011, 6:50 IST

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಮೀಸಲು ಅರಣ್ಯದ ಸಿದ್ದಾಪುರ ಅರಣ್ಯ ವಲಯಕ್ಕೆ ಶನಿವಾರ ಮಧ್ಯಾಹ್ನ ಬೆಂಕಿ ಬಿದ್ದಿದ್ದು, 50 ಎಕರೆಗೂ ಹೆಚ್ಚು ಅರಣ್ಯ ಬೆಂಕಿಯಿಂದ ನಾಶವಾಗಿದೆ.

  ಸಿದ್ದಾಪುರ ಸಮೀಪದ ಅಡ್ಡಹಾದಿ ಬಳಿ ಬೆಂಕಿ ಹೊತ್ತಿಕೊಂಡಿದ್ದು, ಗುಡ್ಡಕ್ಕೆ ವ್ಯಾಪಿಸಿದೆ. ಬೆಂಕಿಯ ಕೆನ್ನಾಲಗೆಗೆ ನೀಲಗಿರಿ, ಅರ್ಕೂಲಸ್ ಇತರ ಮರ ಮುಟ್ಟುಗಳು ಸುಟ್ಟು ಕರಕಲಾಗಿವೆ. ಕಳೆದ ವರ್ಷ ನೆಟ್ಟಿದ್ದ ಸಸಿಗಳು ಕೂಡ ನಾಶವಾಗಿದೆ. ವಲಯ ಅರಣ್ಯಾ ಧಿಕಾರಿ ವಿ.ದೇವರಾಜು ನೇತೃತ್ವದ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಮಾಡಿದ ಪ್ರಯತ್ನ ವಿಫಲ ವಾಯಿತು. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿತಾದರೂ ಅರಣ್ಯ ಪ್ರವೇಶ ಸಾಧ್ಯವಾಗದೆ ವಾಪಸಾಯಿತು.

  ಅರಣ್ಯಕ್ಕೆ ದನಗಾಯಿಗಳು ಬೆಂಕಿ ಹಚ್ಚಿರುವ ಸಾಧ್ಯತೆ ಇದೆ. ಬಿಸಿಲು ಹೆಚ್ಚು ಇದ್ದುದರಿಂದ ಬೆಂಕಿ ಬೇಗ ಆರಿಸಿದೆ. ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದು, ಹತೋಟಿಗೆ ತರಲಾಗಿದೆ.

ADVERTISEMENT

ಹೆಚ್ಚಿನ ನಷ್ಟ ತಪ್ಪಿಸಿದ್ದೇವೆ ಎಂದು ಆರ್‌ಎಫ್‌ಓ ದೇವರಾಜು ತಿಳಿಸಿದ್ದಾರೆ. ಬೆಂಕಿಯ ತಾಪಕ್ಕೆ ಕಾಡಿನಲ್ಲಿದ್ದ ಪಕ್ಷಿಗಳು ದಿಕ್ಕಾಪಾಲಾಗಿ ಹಾರುತ್ತಿದ್ದ ದೃಶ್ಯ ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.