ಪಾಂಡವಪುರ: `ಪಟ್ಟಣದ ಕಲಾ ಮಂದಿರ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು~ ಎಂದು ಶಾಸಕ ಸಿ.ಎಸ್.ಪುಟ್ಟರಾಜು ತಿಳಿಸಿದರು.
ವಿಜಯ ವಿದ್ಯಾ ಸಂಸ್ಥೆಯ ಡಾ.ಕೃಷ್ಣಕುಮಾರ್ ಸಭಾಂಗಣದಲ್ಲಿ ಭಾನುವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಡು- ನುಡಿಯ ಬಗ್ಗೆ ಪ್ರತಿಯೊಬ್ಬ ಕನ್ನಡಿಗನು ಅಭಿಮಾನ ಇಟ್ಟುಕೊಳ್ಳಬೇಕು. ಆಗ ಮಾತ್ರ ಕನ್ನಡ ಭಾಷೆಯ ಬೆಳವಣಿಗೆ ಹೊಂದುತ್ತದೆ. ನವೆಂಬರ್ ತಿಂಗಳ ಪ್ರತಿ ಭಾನುವಾರ ನಾಟಕ, ನೃತ್ಯ, ಸಂಗೀತ, ವಾದ್ಯಗೋಷ್ಠಿ, ವಿಚಾರ ಸಂಕಿರಣ, ಸಂವಾದ ಏರ್ಪಡಿಸಿಬೇಕು. ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಾಡಿನ ಹೆಮ್ಮೆ ಅರಿಯಬೇಕು ಎಂದರು.
ವಿಜಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ. ನಾರಾಯಣಗೌಡ ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ ಮಾತನಾಡಿದರು.
ಕೆ.ಈಶ್ವರ್ ಪಟ್ಟಸೋಮನಹಳ್ಳಿ (ಸಾಹಿತ್ಯ), ಎಸ್.ಸಿ. ಲಕ್ಷ್ಮಣೇಗೌಡ ಸಿಂಗಾಪುರ (ಹರಿಕಥೆ), ಹಾರೋಹಳ್ಳಿ ಡಿ.ಲಕ್ಷ್ಮೇಗೌಡ (ಸಮಾಜಸೇವೆ), ಮೊರಸನಹಳ್ಳಿ ಬಸವರಾಜಪ್ಪ (ವೀರಗಾಸೆ) ಮತ್ತು ಭಾರತಿಕುಮಾರ್ (ಗಾಯನ ಮತ್ತು ಸಂಘಟನೆ) ಅವರನ್ನು ಅಭಿನಂದಿಸಲಾಯಿತು.
ತಾಲ್ಲೂಕು ಕಸಾಪ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಜಿ. ಉಷಾರಾಣಿ, ಶ್ರೀರಂಗಪಟ್ಟಣ ತಾಲ್ಲೂಕು ಅಧ್ಯಕ್ಷ ಪುರುಷೋತ್ತಮ, ಜಿಲ್ಲಾ ಕಸಾಪ ಉಪಾಧ್ಯಕ್ಷ ಎಂ.ರಮೇಶ್, ತಾ.ಪಂ.ಸದಸ್ಯೆ ಶೈಲಜಾ ಗೋವಿಂದರಾಜು, ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಸ್. ಮಂಜುನಾಥ್, ರೈತ ಸಂಘದ ಮುಖಂಡ ಎಚ್.ಎನ್. ವಿಜಯಕುಮಾರ್, ಹಿರೇಮರಳಿ ಚನ್ನೇಗೌಡ, ನಿವೃತ್ತ ಶಿಕ್ಷಕ ಚಂದ್ರಶೇಖರಯ್ಯ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.