ADVERTISEMENT

ಕಸ ವಿಲೇವಾರಿಗೆ ತಳ್ಳುವ ಗಾಡಿ ವಿತರಣೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 4:15 IST
Last Updated 9 ಅಕ್ಟೋಬರ್ 2011, 4:15 IST

ಮಳವಳ್ಳಿ: ಪಟ್ಟಣದ ಪುರಸಭೆ ವ್ಯಾಪ್ತಿಯ ಮನೆಯಲ್ಲಿನ ಕಸ ಸಂಗ್ರಹ ಮಾಡುವ ನಿರ್ವಹಣಾ ಗಾಡಿಗಳನ್ನು ಶುಕ್ರವಾರ ಪುರಸಭೆ ಕಚೇರಿ ಬಳಿ ಸ್ತ್ರೀಶಕ್ತಿ ಸಂಘದ ಮಹಿಳೆಯರಿಗೆ ಘನತ್ಯಾಜ್ಯ ನಿರ್ವಹಣೆಯ ಕಿರಿಯ ಎಂಜಿನಿಯರ್ ಪಾರ್ವತಿ ವಿತರಿಸಿದರು.

ಪಟ್ಟಣದ ಸಾರ್ವಜನಿಕರು, ವರ್ತಕರು ಎಲ್ಲೆಂದರಲ್ಲಿ ಕಸ ಬೀಸಾಡುವುದನ್ನು ಬಿಟ್ಟು ಕಸ ಸಂಗ್ರಹಣೆ ಮಾಡುವ ವಾಹನಗಳು ಬಂದಾಗ ಕಸ ನೀಡುವಂತೆ ಮನವಿ ಮಾಡಿದರು. ಪ್ರಸ್ತುತ 15 ವಾರ್ಡುಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಿದ್ದು, ಮುಂದಿನ ದಿನಗಳಲ್ಲಿ ಪಟ್ಟಣದ 23 ವಾರ್ಡುಗಳಲ್ಲೂ ಕಸ ಸಂಗ್ರಹಣೆ ಮಾಡಲಾಗುವುದು ಎಂದರು.

ಪುರಸಭೆ ಸದಸ್ಯರಾದ ದೊಡ್ಡಯ್ಯ, ರಾಜಶೇಖರ್ ಮೇಸ್ತ್ರಿಗಳಾದ ಕರಿಯಪ್ಪ, ನಾಗರಾಜು, ಮಾದೇಶ ಹಾಗೂ ಇತರರು ಇದ್ದರು.

ಕಂಬನಿ: ಸಂಸ್ಕೃತಿ ಪರಂಪರೆಯನ್ನು ನಾಡಿನ ಜನತೆಗೆ ಪರಿಚಯಿಸಿದ ಮತ್ತೂರು ಕೃಷ್ಣಮೂರ್ತಿ ಅವರ ನಿಧನದಿಂದ ದೇಶದ ಪಾರಂಪರಿಕ ಕೊಂಡಿಕಳಚಿದಂತಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.