ADVERTISEMENT

ಕೊಕ್ಕರೆಗಳ ಸರಣಿ ಸಾವು; ಜಾಗೃತಿಗೆ ಪೇಂಟಿಂಗ್‌

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 8:58 IST
Last Updated 5 ಮಾರ್ಚ್ 2018, 8:58 IST
ಭಾರತೀನಗರ ಸಮೀಪ ಕೊಕ್ಕರೆಬೆಳ್ಳೂರು ಸರ್ಕಾರಿ ಪ್ರೌಢಶಾಲೆ ಕಾಂಪೌಂಡ್‌ ಮೇಲೆ ಕಲಾವಿದ ತೂಬಿನಕೆರೆ ಗೋವಿಂದ್‌ ಅವರು ಬಿಡಿಸಿದ ಪೇಂಟಿಂಗ್‌
ಭಾರತೀನಗರ ಸಮೀಪ ಕೊಕ್ಕರೆಬೆಳ್ಳೂರು ಸರ್ಕಾರಿ ಪ್ರೌಢಶಾಲೆ ಕಾಂಪೌಂಡ್‌ ಮೇಲೆ ಕಲಾವಿದ ತೂಬಿನಕೆರೆ ಗೋವಿಂದ್‌ ಅವರು ಬಿಡಿಸಿದ ಪೇಂಟಿಂಗ್‌   

ಭಾರತೀನಗರ: ಕೊಕ್ಕರೆಗಳು ಪ್ರಕೃತಿಯ ಆಸ್ತಿ, ಸ್ವಾರ್ಥಕ್ಕಾಗಿ ಪರಿಸರ ಹಾಳು ಮಾಡಬೇಡಿ, ಗಿಡಮರ ಬೆಳಸಿ ಪರಿಸರ ರಕ್ಷಿಸಿ, ಪ್ರತಿಯೊಬ್ಬರಲ್ಲೂ ಪಕ್ಷಿ ಪ್ರೇಮ ಬೆಳೆಯಲಿ, ಪಕ್ಷಿಗಳ ಸಂತತಿ ಉಳಿಯಲಿ, ಕೊಕ್ಕರೆಗಳನ್ನು ಉಳಿಸೋಣ ಪರಿಸರ ಕಾಪಾಡೋಣ...

ಸಮೀಪದ ಕೊಕ್ಕರೆಬೆಳ್ಳೂರಿನಲ್ಲಿ ಕೊಕ್ಕರೆಗಳ ಸರಣಿ ಸಾವಿನ ಕುರಿತು ಚಿತ್ರಕಲಾವಿದ ತೂಬಿನಕೆರೆ ಗೋವಿಂದ್‌ ಅವರು ಇಲ್ಲಿನ ಸರ್ಕಾರಿ ಶಾಲೆ ಕಾಂಪೌಂಡ್‌ ಮೇಲೆ ಬಿಡಿಸಿರುವ ಜಾಗೃತಿ ಪೇಂಟಿಂಗ್‌ನ ಘೋಷಣೆಗಳು ಇವು.

ವಿದೇಶದಿಂದ ಸಂತಾನಕ್ಕಾಗಿ ಕೊಕ್ಕರೆ ಬೆಳ್ಳೂರಿಗೆ ಬರುವ ಬಣ್ಣದ ಕೊಕ್ಕರೆಗಳು ಹಾಗೂ ಪೆಲಿಕಾನ್‌ಗಳು ಮನುಷ್ಯನ ಸ್ವಾರ್ಥಕ್ಕೆ ಬಲಿಯಾಗಿ ಸಾವಿಗೀಡಾಗುತ್ತಿವೆ. ಎಲ್ಲರೂ ಮರಗುತ್ತಾರೆ. ಆದರೆ, ಸಾವು ತಡೆಗಟ್ಟ ಬೇಕಾದವರು ಯಾರು ಎಂಬುವುದೇ ಇಲ್ಲಿ ಪ್ರಶ್ನೆ ಎತ್ತಿದ್ದಾರೆ ಕಲಾವಿದ. ಇದು ಒಬ್ಬರ ಜವಾಬ್ದಾರಿಯಲ್ಲ; ಪ್ರತಿಯೊಬ್ಬರ ಕರ್ತವ್ಯ ಎಂದ ಸಂದೇಶ ನೀಡಿದ್ದಾರೆ.

ADVERTISEMENT

‘ಮಾರ್ಚ್‌ 3ರಂದು ‘ಪ್ರಜಾವಾಣಿ’ಯಲ್ಲಿ ಬಂದ ವರದಿ ನನ್ನ ಮನಕಲಕಿತು. ಸ್ವಯಂ ಸ್ಫೂರ್ತಿಯಿಂದ ಗ್ರಾಮಕ್ಕೆ ಬಂದು ಜನರಲ್ಲಿ ಜಾಗೃತಿಗೆ ಚಿತ್ರ ಬರೆದಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

**
ಮನುಷ್ಯನ ಸ್ವಾರ್ಥ ಮತ್ತೊಬ್ಬರನ್ನು ಬಲಿತೆಗೆದುಕೊಳ್ಳಬಾರದು. ಜೀವರಾಶಿಗಳು ಇದ್ದರಷ್ಟೇ ಮನುಷ್ಯ ಬದುಕಲು ಸಾಧ್ಯ

-ತೂಬಿನಕೆರೆ ಗೋವಿಂದ, ಚಿತ್ರ ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.