
ಪ್ರಜಾವಾಣಿ ವಾರ್ತೆಮಂಡ್ಯ: `ನೀಲಂ~ ಚಂಡಮಾರುತ ಪರಿಣಾಮ, ಗುರುವಾರವೂ ಜಿಲ್ಲೆಯಾದ್ಯಂತ ಜಿಟಿಜಿಟಿ ಮಳೆ ಸುರಿಯಿತು. ಇದರಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಮಂಡ್ಯದಲ್ಲಿ 57 ಮಿ.ಮೀ, ಕೊತ್ತತ್ತಿ 69 ಮಿ.ಮೀ., ಕಿರುಗಾವಲು 82 ಮಿ.ಮೀ., ಹಲಗೂರು 85.50 ಮಿ.ಮೀ., ಶಿವನಸಮುದ್ರ 84 ಮಿ.ಮೀ., ದೇವಲಾಪುರ 45 ಮಿ.ಮೀ, ಬಿಂಡಿಗನವಿಲೆ 46.5 ಮಿ.ಮೀ. ಹಾಗೂ ಕೊಪ್ಪದಲ್ಲಿ 0.50 ಮಿ.ಮೀ. ಮಳೆಯಾಗಿದೆ. ಮಳೆ ಸುರಿಯುತ್ತಿರುವುದರಿಂದ ರಾಜ್ಯೋತ್ಸವ ಮೆರವಣಿಗೆಗೂ ಅಡ್ಡಿಯಾಯಿತು. ನಗರ ಸೇರಿದಂತೆ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.