ADVERTISEMENT

ನೀರು ಪೂರೈಕೆ: ಹಣಕಾಸು ಕೊರತೆ ಇಲ್ಲ-ಸಿಇಒ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 7:30 IST
Last Updated 19 ಮಾರ್ಚ್ 2011, 7:30 IST

ಮಂಡ್ಯ: ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆ, ಸಮಸ್ಯೆ ನಿವಾರಣೆಗೆ ಹಣ ಕಾಸು ಕೊರತೆಯಿಲ್ಲ; ಪ್ರಾಕೃತಿಕ ಪರಿ ಹಾರ ನಿಧಿಯಿಂದಲೂ ರೂ.  4.5 ಕೋಟಿ ಪಡೆದಿದ್ದು, ಸಮಸ್ಯೆ ಇರುವ ಕಡೆ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳ ಲಾಗುವುದು ಎಂದು  ಜಿಲ್ಲಾ ಪಂಚಾ ಯಿತಿ ಸಿಇಒ ಜಿ.ಜಯರಾಂ ಶುಕ್ರವಾರ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನೀರು ಪೂರೈಕೆ  ಸಮಸ್ಯೆ ಕುರಿತು ಮಾತನಾಡಿದ ಅವರು, ಪ್ರಾಮುಖ್ಯತೆ ಆಧಾರದಲ್ಲಿ ಕುಡಿ ಯುವ ನೀರು ಸಮಸ್ಯೆ ಬಗೆಹರಿಸಲು ತಾಲ್ಲೂಕು ಮಟ್ಟದಲ್ಲಿಯೂ ತಹಶೀ ಲ್ದಾರ್, ತಾಪಂ ಇಒ ಮತ್ತು ಸಹಾ ಯಕ ಕಾರ್ಯ ನಿರ್ವಾಹಕ ಎಂಜಿನಿ ಯರ್ ನೇತೃತ್ವದ ಸಮಿತಿ ರಚಿಸಲಾಗಿದೆ ಎಂದರು.

ಈಗ ಜಿಲ್ಲೆಯಲ್ಲಿ  480 ಹಳ್ಳಿಗಳಿಗೆ ನದಿ ಮೂಲ ಆಧರಿಸಿ ನೀರು ಪೂರೈಸುತ್ತಿದ್ದು, ಉಳಿದಂತೆ ಸುಮಾರು 1,000 ಹಳ್ಳಿಗಳಿಗೆ ಅಂತರ್ಜಲವೇ ನೀರಿನ ಮೂಲ. ಈ ಗ್ರಾಮಗಳಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಸುವ ಬದಲಿಗೆ, ಇರುವ ಬಾವಿಗಳಿಗೆ ಪುನಃಶ್ಚೇತನ ಕೊಡಬೇಕು ಎಂಬುದು ಸರ್ಕಾರದ ನೀತಿಯಾಗಿದೆ ಎಂದರು.ಸದಸ್ಯರು ಸಮಸ್ಯೆಗಳ ಮಾಹಿತಿ ನೀಡುವುದರ ಜೊತೆಗೆ, ಅಗತ್ಯತೆ ಕುರಿತು ಸಮರ್ಥನೆಯನ್ನೂ ನೀಡ ಬೇಕು. ಅನಿವಾರ್ಯ ಸಂದರ್ಭದಲ್ಲಿ ಮಾತ್ರವೇ ಹೊಸ ಬೋರ್‌ವೆಲ್ ಕೊರೆಸಬಹುದು.

ಪ್ರಾಕೃತಿಕ ಪರಿಹಾರ ನಿಧಿಯಿಂದ ಹೊಸದಾಗಿ ಬೋರ್ ವೆಲ್ ಕೊರೆಸಲು ಅವಕಾಶವಿಲ್ಲ. ಹಾಲಿ ಬೋರ್‌ವೆಲ್‌ಗಳಿಗೆ ಕಾಯಕಲ್ಪ ನೀಡಬಹುದು ಎಂದರು.2010-11ನೇ ಸಾಲಿನಿಂದ ಕುಡಿಯುವ ನೀರು ಪೂರೈಕೆ ಯೋಜನೆ ಯನ್ನು ಜಿಲ್ಲಾ ಪಂಚಾಯಿತಿಯೇ ನೇರವಾಗಿ ಜಾರಿಗೆ ತರುವಂತಿಲ್ಲ. ಈ ಸಂಬಂಧ ಸದಸ್ಯರು, ಜನಪ್ರತಿನಿಧಿಗಳ ಸಲಹೆ ಪಡೆದು ಯೋಜನೆ ರೂಪಿಸಿ ಸರ್ಕಾರದ ಅನುಮೋದನೆ ನೀಡಿದ ಬಳಿಕ ಟೆಂಡರ್ ಕರೆದು ಜಾರಿಗೆ ತರರಬೇಕಿದೆ ಎಂದರು.ತಾಲ್ಲೂಕು ಮಟ್ಟದಲ್ಲಿ ಕುಡಿಯುವ ನೀರು ಸಮಸ್ಯೆ ಅರಿಯಲು ಶೀಘ್ರವೇ ಜನಪ್ರತಿನಿಧಿಗಳು, ಅಧಿಕಾರಿಗಳು ಇರುವಂತೆ ತಾಲ್ಲೂಕು ಹಂತದಲ್ಲಿಯೂ ಸಭೆ ಕರೆಯಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.