ADVERTISEMENT

`ನೌಕರರಿಗೆ ಕಾನೂನು ಅರಿವು ಅಗತ್ಯ'

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 6:14 IST
Last Updated 6 ಸೆಪ್ಟೆಂಬರ್ 2013, 6:14 IST

ಮಂಡ್ಯ: ಸರ್ಕಾರಿ ನೌಕರರು ನೇಮಕಾತಿ ಸಂದರ್ಭದಲ್ಲಿಯೇ ಸಂವಿಧಾನಬದ್ಧ ಪ್ರಮಾಣ ಸ್ವೀಕರಿಸುತ್ತಾರೆ. ಪ್ರತಿದಿನ ಕೆಲಸ ನಿರ್ವಹಿಸುವಾಗ ಕಾನೂನು ಪಾಲಿಸಬೇಕು. ಕಾನೂನು ದುರುಪಯೋಗಕ್ಕೆ ಅವಕಾಶ ನೀಡಬಾರದು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಸದಾನಂದ ದೊಡ್ಡಮನಿ ಅಭಿಪ್ರಾಯಪಟ್ಟರು.

ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಇತ್ತೀಚೆಗೆ ಹೊಸದಾಗಿ ನೇಮಕಾತಿ ಹೊಂದಿದ ಲಿಪಿಕ ನೌಕರರಿಗೆ ಏರ್ಪಡಿಸಲಾಗಿದ್ದ ಒಂದೂವರೆ ತಿಂಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ, ಮತ ಭಾಷಾಭಿಮಾನದ ಆಧಾರದಲ್ಲಿ ತಾರತಮ್ಯ ಮಾಡ ಬಾರದು ಎಂಬ ಮೂಲ ಉದ್ದೇಶದಿಂದ ಅಂಬೇಡ್ಕರ್ ಅವರು ಕಾನೂನನ್ನು ರೂಪಿಸಿದರು ಎಂದರು.

ಮಹಿಳಾ ಕಾರ್ಮಿಕರಿಗೆ ಕೂಲಿ ಕೊಡುವ ವಿಷಯದಲ್ಲಿ ತಾರತಮ್ಯ ಮಾಡಬಾರದು. ಕಡಿಮೆ ಕೂಲಿ ಕೊಟ್ಟು, ಪುರುಷರಿಗೆ ಹೆಚ್ಚಿನ ಕೂಲಿ ಕೊಟ್ಟರೆ ಮಹಿಳೆಯು ತನ್ನನ್ನು ಎರಡನೇ ದರ್ಜೆ ಪ್ರಜೆಯೆಂದು ನೋಡುತ್ತಿದ್ದಾರೆ ಎಂಬ ಭಾವನೆ ಅವಳಲ್ಲಿ ಮೂಡುತ್ತದೆ ಎಂದರು.

ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಸಿದ್ದಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ತರಬೇತಿ ಸಂಸ್ಥೆಯ ನಿವೃತ್ತ ಜಂಟಿ ನಿರ್ದೇಶಕ ಬಿ.ಕೆ.ವಾಸು ಹಾಗೂ ಉಪ ಪ್ರಾಚಾರ್ಯ ಕೆ.ಸೌಮ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT