ADVERTISEMENT

ಬಲಮುರಿ ಬಳಿ ಹೆಬ್ಬಾವು ಪತ್ತೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 11:27 IST
Last Updated 19 ಜೂನ್ 2013, 11:27 IST

ಶ್ರೀರಂಗಪಟ್ಟಣ: ತಾಲ್ಲೂಕಿನ ಬೆಳಗೊಳ ಸಮೀಪದ ಬಲಮುರಿ ಬಳಿ ಸುಮಾರು 8 ಅಡಿ ಉದ್ದದ ಹೆಬ್ಬಾವು ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ.

ಬಲಮುರಿ ಒಡ್ಡಿಗೆ ಅನತಿ ದೂರದಲ್ಲಿರುವ ಬಿ.ಎಸ್.ಸುಬ್ಬೇಗೌಡ ಅವರ ಜಮೀನಿನ ಬಳಿ ಈ ಹಾವು ಕಂಡು ಬಂದಿದೆ. ಬತ್ತದ ಕೊಯ್ಲು ಮಾಡುತ್ತಿದ್ದ ಕೃಷಿ ಕಾರ್ಮಿಕರಿಗೆ ಈ ಹಾವು ಗೋಚರಿಸಿದೆ. ಕಾವೇರಿ ನದಿಯ ಸಣ್ಣ ತೊರೆಯಲ್ಲಿ ಮೀನು ಹಿಡಿಯಲು ಹಾಕಿದ್ದ ಬಲೆಗೆ ಹೆಬ್ಬಾವು ಸಿಕ್ಕಿಕೊಂಡಿತ್ತು. ಸುಮಾರು 20 ಕೆ.ಜಿ ತೂಕ ಇರುವ ಹಾವನ್ನು ಬಲಮುರಿಯಲ್ಲಿ ವ್ಯಾಪಾರ ಮಾಡುವ ದೇವರಾಜು, ಜಗದೀಶ ಇತರರು ರಕ್ಷಿಸಿದ್ದಾರೆ.

ಈ ಹೆಬ್ಬಾವನ್ನು ಸುತ್ತಮುತ್ತಲ ಜಮೀನುಗಳ ರೈತರು ಹಾಗೂ ಬಲಮುರಿ ವಿಹಾರ ತಾಣಕ್ಕೆ ಬಂದಿದ್ದ ಪ್ರವಾಸಿಗರು ಕುತೂಹಲದಿಂದ ವೀಕ್ಷಿಸಿದರು. ಸುಮಾರು ಎರಡು ತಾಸು ಕಾಲ ಬಲಮುರಿಯಲ್ಲಿ ಈ ಹಾವನ್ನು ಇಟ್ಟುಕೊಳ್ಳಲಾಗಿತ್ತು. ಯುವಕರು ಹಾವನ್ನು ಕೈಯಲ್ಲಿ ಎತ್ತಿ ಹಿಡಿದು ಖುಷಿಪಟ್ಟರು. ಸಮೀಪ ಭಂಭಂ ಆಶ್ರಮದ ಅರಣ್ಯದಲ್ಲಿ ಹೆಬ್ಬಾವು ಬಿಟ್ಟು ಬಂದಿದ್ದೇವೆ ಎಂದು ಬೆಳಗೊಳ ರವಿಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.