ADVERTISEMENT

ಭ್ರಷ್ಟಾಚಾರ ದೇಶಕ್ಕೆ ಕಳಂಕ: ದೊರೆಸ್ವಾಮಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 7:50 IST
Last Updated 10 ಅಕ್ಟೋಬರ್ 2011, 7:50 IST

ಕೃಷ್ಣರಾಜಪೇಟೆ: ಅಧಿಕಾರಸ್ಥರ ಭ್ರಷ್ಟತೆಗೆ ಸಂಬಂಧಿಸಿದಂತೆ ಈಚೆಗೆ ನಡೆಯುತ್ತಿರುವ ವಿದ್ಯಮಾನಗಳು ದೇಶದ ಗೌರವಕ್ಕೆ ಚ್ಯುತಿ ತರುತ್ತಿವೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ ಎಚ್.ಎಸ್. ದೊರೆಸ್ವಾಮಿ ವಿಷಾದಿಸಿದರು.

ತಾಲ್ಲೂಕಿನ ಮಾದಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕೆಂಕೇರಮ್ಮ ಚಾರಿಟಬಲ್ ಅಂಡ್ ಕಲ್ಚರಲ್ ಟ್ರಸ್ಟ್ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಶನಿವಾರ ಉದ್ಘಾಟಿಸಿ ಮಾತನಾಡಿದರು.

ಭಾರತವು ಜಾಗತಿಕ ಮಟ್ಟದಲ್ಲಿ ಉತ್ತಮ ಪರಂಪರೆಗೆ ಹೆಸರಾಗಿದೆ. ಇಲ್ಲಿನ ಜನರು ಸಾಧಕರ, ಹೋರಾಟ ಗಾರರ, ವಿಶೇಷತೆ ಹಾಗೂ ತಾಯ್ನಾಡಿನ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ವ್ಯಾಪಕ ಅವಕಾಶ ಗಳಿವೆ.

ವಿದ್ಯಾರ್ಥಿ ಗಳು ಇದನ್ನು ಮನಗಂಡು ದೇಶದ ಗೌರವ ಹೆಚ್ಚಿಸಲು ಕಾರ್ಯೋನ್ಮುಖ ರಾಗಬೇಕು. ಚಿಕ್ಕಂದಿನಿಂದಲೇ ಪ್ರಾಮಾ ಣಿಕತೆ, ಭ್ರಾತೃತ್ವ, ಸೇವಾ ಮನೋ ಭಾವನೆ, ಪರೋಪಕಾರ ಗುಣಗಳನ್ನು ಮೈಗೂಡಿಸಿಕೊಂಡು ಸದೃಢ ದೇಶದ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದರು.

ಶಾಸಕ ಕೆ.ಬಿ. ಚಂದ್ರಶೇಖರ್, ವಿಧಾನಸಭೆ ಮಾಜಿ ಅಧ್ಯಕ್ಷ ಕೃಷ್ಣ, ವಿಧಾನಪರಿಷತ್ ಸದಸ್ಯ ಗೋ. ಮಧುಸೂಧನ್, ತಾ.ಪಂ. ಸದಸ್ಯೆ ವಿನೋದಮ್ಮ, ಜಿ.ಪಂ. ಮಾಜಿ ಉಪಾಧ್ಯಕ್ಷ ಪಾಪೇಗೌಡ, ಬಿಇಓ ಎ.ಬಿ. ಪುಟ್ಟಸ್ವಾಮಿಗೌಡ, ಟ್ರಸ್ಟ್ ಅಧ್ಯಕ್ಷ ಎಂ.ಕೆ. ಶಿವರಾಂ, ಕಾರ್ಯದರ್ಶಿ ಸುಬ್ರಹ್ಮಣ್ಯ, ಮುಖಂಡ ರಾದ ಚಟ್ಟಂಗೆರೆ ನಾಗೇಶ್, ಮಾದಾಪುರ ಸೋಮಶೇಖರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.