ADVERTISEMENT

ಮಂಡ್ಯಕ್ಕೂ ಬಂತು ನಗರ ಬಸ್ ಸೇವೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 8:05 IST
Last Updated 9 ಜುಲೈ 2012, 8:05 IST

ಮಂಡ್ಯ: ಮಂಡ್ಯದಲ್ಲಿ ನಗರ ಸಾರಿಗೆ ಸಂಚಾರ ಬಸ್ ಸೇವೆ ಆರಂಭಿಸಲಾಗಿದೆ. ನಗರದ ವಿವಿಧ ಬಡಾವಣೆಗಳಲ್ಲಿ ಈಗ ಈ ಬಸ್ಸಗಳದ್ದೇ ಕಾರುಬಾರು. ನಗರ ಬಸ್ ಸಂಚಾರ ಸೇವೆ ಆರಂಭಿಸಿರು ವುದರಿಂದ ಇಲ್ಲಿನ ನಿವಾಸಿಗಳ ಬಹು ದಿನಗಳ ಬೇಡಿಕೆ ಈಡೇರಿದೆ.

ನಗರ ಬಸ್ ಸಂಚಾರಕ್ಕೆಂದೇ ಹನ್ನೊಂದು ಹೊಸ ಬಸ್ಸುಗಳನ್ನು ಓಡಿಸಲಾಗುತ್ತಿದೆ. ಇವು ಐದು ರೂಟುಗಳಲ್ಲಿ ಬೆಳಿಗ್ಗೆ 5.30 ರಿಂದ ರಾತ್ರಿ 9 ಗಂಟೆಯವರೆಗೂ ಸಂಚರಿಸು ತ್ತವೆ. ನಗರದ ಬಹುತೇಕ ಪ್ರದೇಶದಲ್ಲಿ ಈಗ ಈ ಬಸ್ಸುಗಳು ಸಂಚರಿಸುತ್ತಿವೆ.

ಕೆಲವು ಮಾರ್ಗಗಳಲ್ಲಿ ರಸ್ತೆ ಇಕ್ಕಟ್ಟಾಗಿದೆ. ಜೊತೆಗೆ ವಾಹನ ಹಾಗೂ ಜನ ಸಂಚಾರವೂ ಹೆಚ್ಚು. ಅಂತಹ ಪ್ರದೇಶಗಳಿಗೂ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಮಾರ್ಗಗಳು: ಮಂಡ್ಯ ಬಸ್ ನಿಲ್ದಾಣದಿಂದ ಕಾರಸವಾಡಿ ಮಾರ್ಗ ವಾಗಿ ಸಂತಕಲಸಗೆರೆ, ಮಂಡ್ಯ ಬಸ್ ನಿಲ್ದಾಣದಿಂದ ಹೊಸಹಳ್ಳಿ ಸರ್ಕಲ್ ಕ್ಯಾತಂಗೆರೆ ಮಾರ್ಗವಾಗಿ ಮರಳಿ ಬಸ್ ನಿಲ್ದಾಣಕ್ಕೆ ಹಾಗೂ ಮಂಡ್ಯ ಬಸ್ ನಿಲ್ದಾಣದಿಂದ ಹೊಳಲು ಸರ್ಕಲ್ ಮಾರ್ಗವಾಗಿ ಸಾತನೂರ ವಿಶ್ವೇಶ್ವ ರಯ್ಯ ಬ್ಯಾಂಕ್‌ಗೆ ತೆರಳುತ್ತದೆ.

ಮಂಡ್ಯ ಬಸ್ ನಿಲ್ದಾಣದಿಂದ ಕಲ್ಲಹಳ್ಳಿ ಕ್ಯಾತಂಗೆರೆ ಮಾರ್ಗವಾಗಿ ಬಸ್ ನಿಲ್ದಾಣಕ್ಕೆ, ಮಂಡ್ಯ ಬಸ್ ನಿಲ್ದಾಣದಿಂದ ಯತ್ತಗದಹಳ್ಳಿ, ಅರಕೇಶ್ವರ ದೇವಸ್ಥಾನ, ಉಮ್ಮಡಹಳ್ಳಿ ಗೇಟ್‌ವರೆಗೂ ಬಸ್ ಸಂಚರಿಸುತ್ತವೆ.

ಸಮಯ: ಮಂಡ್ಯ ಬಸ್ ನಿಲ್ದಾಣದಿಂದ ಹೊಸಹಳ್ಳಿ ಸರ್ಕಲ್, ಕ್ಯಾತಂಗೆರೆ ಮಾರ್ಗ ಹಾಗೂ ಮಂಡ್ಯ ಬಸ್ ನಿಲ್ದಾಣದಿಂದ ಕಲ್ಲಹಳ್ಳಿ ಮಾರ್ಗವಾಗಿ ಮರಳಿ ಬಸ್ ನಿಲ್ದಾಣಕ್ಕೆ ಬರುವ ಮಾರ್ಗಗಳಲ್ಲಿ 15 ರಿಂದ 30 ನಿಮಿಷಕ್ಕೆ ಒಂದು ಬಸ್ ಬಿಡಲಾಗಿದೆ. ಉಳಿದ ಮಾರ್ಗಗಳಲ್ಲಿ ಗಂಟೆ ಗೊಂದರಂತೆ ಬಸ್ ಓಡಾಡುತ್ತವೆ.

ಗ್ರಾಮೀಣರಿಗೂ ಸೌಲಭ್ಯ: ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಿಂದ ನಗರಕ್ಕೆ ಕಚೇರಿ ಕಾರ್ಯ, ಸಂಬಂಧಿಕರ ಮನೆ, ಕಾರ್ಯಕ್ರಮಗಳಿಗಾಗಿ ಆಗಮಿ ಸುವ ಪ್ರಯಾಣಿಕರಿಗೂ ನಗರ ಬಸ್ ಸಂಚಾರದ ಲಾಭ ದೊರೆಯುವಂತೆ ಸಾರಿಗೆ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ.

ತಾಲ್ಲೂಕು ಕೇಂದ್ರಗಳಿಂದ ಬೆಳಿಗ್ಗೆ ಆಗಮಿಸಿ, ಸಂಜೆ ಮರಳುವವರಿಗಾಗಿ ಬಸ್ ಪಾಸ್ ನೀಡಲಾಗುತ್ತದೆ. ಆ ಬಸ್ ಪಾಸ್ ತೆಗೆದುಕೊಂಡವರು ಮಂಡ್ಯದಲ್ಲಿ ನಗರ ಸಾರಿಗೆ ಬಸ್ಸುಗಳಲ್ಲಿ ಸಂಚರಿಸಬಹುದಾಗಿದೆ. ಇದರಿಂದ ಪ್ರಯಾಣಿಕರಿಗೆ ಉಳಿತಾಯವಾಗಲಿದೆ.

ನಗರದ ಕೇಂದ್ರ ಬಸ್ ನಿಲ್ದಾಣದ ಒಂದು ಬದಿಯಲ್ಲಿ ನಗರ ಸಾರಿಗೆ ಬಸ್ ನಿಲ್ಲುವ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಬಸ್‌ಗಳ ಮಾರ್ಗ ಹಾಗೂ ಹೊರಡುವ ವೇಳಾ ಪಟ್ಟಿಯನ್ನೂ ಪ್ರದರ್ಶಿಸ ಲಾಗಿ ದೆ. ಆದರೆ ಬಸ್ ಸಂಚರಿಸುವ ಮಾರ್ಗ ದಲ್ಲಿ ಬಸ್ ನಿಲ್ಲುವ ನಿಲ್ದಾಣಗಳ ಬಗೆಗೆ ಹಾಗೂ ಅಲ್ಲಿಂದ ಬಸ್ ಹೊರಡುವ ವೇಳಾಪಟ್ಟಿ ಇಲ್ಲ. ಇದ ರಿಂದಾಗಿ ಪ್ರಯಾಣಿಕರಿಗೆ ಯಾವಾಗ ಬಸ್ ಬರುತ್ತದೆ ಎಂಬುದು ಗೊತ್ತಾ ಗುತ್ತಿಲ್ಲ.

ಸಿಟಿ ಬಸ್ ಸೇವೆ ಆರಂಭಿಸಿರುವುದು ಬಹಳ ಅನುಕೂಲವಾಗಿದೆ. ಇದರಿಂ ದಾಗಿ ಜನ ಸಾಮಾನ್ಯರ ಹಣ ಉಳಿ ತಾಯವಾಗುತ್ತಿದೆ. ಸಾರಿಗೆ ಇಲಾಖೆ ನಗರದಲ್ಲಿ ಗುರುತಿಸಿರುವ ಬಸ್ ನಿಲ್ದಾಣಗಳ ಪಟ್ಟಿ  ಹಾಗೂ ಆ ನಿಲ್ದಾಣಗಳಿಗೆ ಬಸ್ ಆಗಮಿಸುವ ವೇಳಾ ಪಟ್ಟಿಯನ್ನು ಪ್ರಕಟಿಸಬೇಕು ಎನ್ನುತ್ತಾರೆ ಹಾಲಹಳ್ಳಿ ಪುಟ್ಟೇಗೌಡ.

ಸಿಟಿ ಬಸ್ ಆರಂಭ ಸಂತಸ ತಂದಿದೆ. ಹಿಂದೆ ಎರಡೂ ಬಾರಿ ಆರಂಭಿಸಿ, ನಿಲ್ಲಿಸಲಾಗಿದೆ. ಈ ಬಾರಿ ಹಾಗಾಗ ಬಾರದು. ಸಿಟಿ ಬಸ್ ನಿಲ್ದಾಣ ನಿರ್ಮಿಸುವ ಮೂಲಕ ಜನರಿಗೆ ಕುಳಿತು ಕೊಳ್ಳಲು ಅವಕಾಶ ಮಾಡಿಕೊಡಬೇಕು ಎನ್ನುತ್ತಾರೆ ಕೆ. ಸತೀಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.