ADVERTISEMENT

ಮಕ್ಕಳ ಹಕ್ಕು ರಕ್ಷಣೆಗೆ ಮುಂದಾಗಿ: ಪ್ರಶಾಂತ್‌ಬಾಬು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 8:40 IST
Last Updated 9 ಡಿಸೆಂಬರ್ 2013, 8:40 IST

ಮಳವಳ್ಳಿ: ಕೇಂದ್ರ ಸರ್ಕಾರವು ಮಾಡಿಕೊಂಡಿರುವ ಅಂತರಾಷ್ಟ್ರೀಯ  ಮ್ಕಕಳ ಒಡಂಬಡಿಕೆಗಳ ಪ್ರಕಾರ ಮಕ್ಕಳಿಗೂ ಅನೇಕ ಹಕ್ಕು ನೀಡಲಾಗಿದ್ದು ಅವುಗಳನ್ನು  ರಕ್ಷಿಸುವ ನಿಟ್ಟಿನಲ್ಲಿ ಮಕ್ಕಳ ಗ್ರಾಮಸಭೆಗಳನ್ನು ನಡೆಸಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಟಿ.ಎ. ಪ್ರಶಾಂತ್‌ಬಾಬು ತಿಳಿಸಿದರು.

ತಾಲ್ಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಈಚೆಗೆ ನಡೆದ ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮಕ್ಕಳಿಗೆ ಎಲ್ಲಾ ಹಕ್ಕುಗಳನ್ನು ದೊರಕಿಸುವ ಮೂಲಕ ಉಜ್ವಲ ಭಾರತ ಕಟ್ಟಬೇಕೆಂದು ತಿಳಿಸಿದರು. ಗ್ರಾಮ ಸಭೆಯ ಅಧ್ಯಕ್ಷತೆಯನ್ನು  ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವಪ್ಪ ವಹಿಸಿ ಮಾತನಾಡಿ ಎಸ್.ಡಿ.ಎಂ.ಸಿ ಹಾಗೂ ಬಾಲವಾಡಿ ಸಮಿತಿಗಳು ಕ್ರಿಯಾಶೀಲವಾಗಿ ರುವುದ ರಿಂದ ಮಕ್ಕಳ ಅನೇಕ ಹಕ್ಕುಗಳನ್ನು ಸಂರಕ್ಷಿಸಬಹುದು ಎಂದು ಹೇಳಿದರು. ಶಿಕ್ಷಕರು, ಪೋಷಕರು, ಶಾಲಾಮಕ್ಕಳು ,ಸಾರ್ವಜನಿಕರು ಮಕ್ಕಳ ಕುಂದುಕೊರತೆಗಳ ಬಗ್ಗೆ ಪ್ರಸ್ತಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.