ADVERTISEMENT

ಮದ್ದೂರು: ವರುಣ ದೇವನಿಗಾಗಿ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2012, 6:10 IST
Last Updated 11 ಆಗಸ್ಟ್ 2012, 6:10 IST

ಮದ್ದೂರು: ಮಳೆಗಾಗಿ ವರುಣದೇವನನ್ನು ಪ್ರಾರ್ಥಿಸಿ ಸಮೀಪದ ದೇಶಹಳ್ಳಿ ಕೆರೆ ಬಳಿ ಶುಕ್ರವಾರ  ಹೊನ್ನಮ್ಮದೇವಿ ಹಾಗೂ ಗಡಿದೇವರುಗಳ ವಿಶೇಷ ಪೂಜೆ ನೆಡೆಯಿತು.

ದೇಶಹಳ್ಳಿಯ ಹೊನ್ನದೇವಿ, ಪಟಲದಮ್ಮ, ಮದ್ದೂರಿನ ಮದ್ದೂರಮ್ಮ, ದಂಡಿನಮಾರಮ್ಮ, ವೆಂಕಟರಮಣಸ್ವಾಮಿ, ರೇಣುಕಾ ಎಲ್ಲಮ್ಮದೇವಿ, ಚನ್ನಸಂದ್ರದ ಮಾರಮ್ಮ, ಚನ್ನೇಗೌಡನದೊಡ್ಡಿಯ ಮಾರಮ್ಮ, ವೈದ್ಯನಾಥಪುರದ ಬಸವಪ್ಪ, ಶಿವಪುರದ ಬೋರೇದೇವರು, ಬಸವೇಶ್ವರ, ಮಾಸ್ತಮ್ಮದೇವಿ, ಚಾಮನಹಳ್ಳಿಯ ಮಹದೇಶ್ವರಸ್ವಾಮಿ ದೇವರುಗಳ ಪಟಗಳು ಪೂಜಾ ಕೈಂಕರ್ಯದಲ್ಲಿ ಬಳಸಲಾಯಿತು.

ಮಳೆಗಾಗಿ ವರುಣದೇವನನ್ನು ಪ್ರಾರ್ಥಿಸಿ ನೂರಾರು ಹೆಂಗಳೆಯರು ಈ ಸಂದರ್ಭದಲ್ಲಿ ದೇವರಿಗೆ ವಿಶೇಷ ತಂಬಿಟ್ಟಿನ ಆರತಿ ಸಲ್ಲಿಸಿದರು. ಕೆರೆಯ ಕೋಡಿಗೆ ಈ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ಏರ್ಪಡಿಸಲಾಯಿತು. ನಂತರ ಎ್ಲ್ಲಲ 14 ದೇವರುಗಳು ಮೆರವಣಿಗೆ ಪಟ್ಟಣದ ವಿವಿಧ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಪಟ್ಟಣದ ಸೇರಿದಂತೆ ದೇಶಹಳ್ಳಿ, ಚನ್ನೇಗೌಡನದೊಡ್ಡಿ, ಚಾಮನಹಳ್ಳಿ, ವೈದ್ಯನಾಥಪುರ, ಚನ್ನಸಂದ್ರ ಸೇರಿದಂತೆ ವಿವಿಧ ಗ್ರಾಮಗಳ 2 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.  ಶಾಸಕಿ ಕಲ್ಪನಾ ಸಿದ್ದರಾಜು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.