ADVERTISEMENT

ಮಹಾಲಯ ಅಮಾವಾಸ್ಯೆ: ವ್ಯಾಪಾರ ಜೋರು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 5:35 IST
Last Updated 15 ಅಕ್ಟೋಬರ್ 2012, 5:35 IST

ಮಂಡ್ಯ: ಮಹಾಲಯ ಅಮಾವಾಸ್ಯೆ ಹಬ್ಬದ ಹಿನ್ನೆಲೆಯಲ್ಲಿ ಭಾನುವಾರ ಮಂಡ್ಯದ ಮಾರುಕಟ್ಟೆಯಲ್ಲಿ ಹಣ್ಣು, ಹೂವು ತರಕಾರಿ ಸೇರಿದಂತೆ ಪೂಜಾ ಸಾಮಾಗ್ರಿಗಳ ಖರೀದಿ ಭರಾಟೆಯಿಂದ ನಡೆದಿತ್ತು.

ಬೆಲೆ ಏರಿಕೆ ಬಿಸಿಯ ನಡುವೆಯೂ, ನಗರಸಭೆ ಎದುರಿನ ಫುಟ್‌ಪಾತ್, ಮಾರುಕಟ್ಟೆ ಮತ್ತು ಪೇಟೆ ಬೀದಿ ಸೇರಿದಂತೆ ಹಲವೆಡೆ ವ್ಯಾಪಾರ-ವಹಿವಾಟು ಜೋರಾಗಿ ನಡೆದಿತ್ತು. ವಿವಿಧೆಡೆಯಿಂದ ಬಂದಿದ್ದ ಗ್ರಾಮಸ್ಥರು, ಖರೀದಿಯಲ್ಲಿ ತೊಡಗಿದ್ದು ಕಂಡುಬಂತು.

ಹೂವು ಮಾರೊಂದಕ್ಕೆ 30 ರೂ. ಇದ್ದರೆ, ಬಾಳೆಹಣ್ಣು ಕೆ.ಜಿಗೆ 40 ರೂ., ಸೇಬು 80 ರೂ. ಇತ್ತು. ಅಲ್ಲದೆ, ಸಿಹಿ ತಿನಿಸು ಕೊಳ್ಳಲು ಬೇಕರಿ ಬಳಿ ಜನರ ದಟ್ಟಣೆ ಕಂಡುಬಂತು.

ಈ ಹಬ್ಬದ ದಿನವೇ ಬಹುತೇಕರು ಬಾಡೂಟ ಮಾಡಿ ನೆಂಟರು, ಆಪ್ತರನ್ನು ಊಟಕ್ಕೆ ಕರೆಯುವುದು ಸಾಮಾನ್ಯ. ಆದರೆ, ಈ ಬಾರಿ ಹಬ್ಬ ಸೋಮವಾರ ಬಂದಿರುವುದರಿಂದ, ಸಿಹಿ ಊಟ ಮಾಡಲಾಗುತ್ತದೆ. ಮಂಗಳವಾರ ಬಾಡೂಟ ಮಾಡುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.