ADVERTISEMENT

ವರಿಷ್ಠರಿಗೆ ಪರಿಶಿಷ್ಟ ಮುಖಂಡರ ತರಾಟೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 8:10 IST
Last Updated 19 ಫೆಬ್ರುವರಿ 2012, 8:10 IST

ಮಂಡ್ಯ: `ಸಣ್ಣ-ಪುಟ್ಟ ಕೆಲಸ ಆಗುವುದಿಲ್ಲ. ಕಾರ್ಯಕರ್ತ ಎಂದು ಕಾಫಿ ವೆಚ್ಚವನ್ನು ಭರಿಸುವುದಿಲ್ಲ. ಹೀಗಿದ್ದ ಮೇಲೆ ದಲಿತರು ಈ ಪಕ್ಷವನ್ನು ಏಕೆ ಬೆಂಬಲಿಸಬೇಕು. ಪಕ್ಷ ಕಟ್ಟುವ ಇರಾದೆ ಇದ್ದರೆ ಸಹಕಾರ ಕೊಡಿ. ಇಲ್ಲವಾದರೆ ಆ ಉದ್ದೇಶವನ್ನೇ ಕೈಬಿಡಿ~ ಎಂದು ಬಿಜೆಪಿ ಎಸ್‌ಸಿ, ಎಸ್‌ಟಿ ಮೋರ್ಚಾ ಮುಖಂ ಡರು ಅಧ್ಯಕ್ಷರಿಗೆ ತರಾಟೆಗೆ ತೆಗೆದುಕಂಡರು.

ಎಸ್‌ಟಿ, ಎಸ್‌ಸಿ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ ಎ.ಆರ್. ಕೃಷ್ಣ ಮೂರ್ತಿ ಮತ್ತು ಮುಖಂಡರ ಎದುರೇ ಬಿಜೆಪಿ ಜಿಲ್ಲಾ ನಾಯಕತ್ವನ್ನು ತರಾಟೆಗೆ ತೆಗೆದುಕೊಂಡಿರುವ ಜಿಲ್ಲಾ ಘಟಕದ ಅಧ್ಯಕ್ಷ ಪುಟ್ಟ ಅಂಕಯ್ಯ, ಒಬ್ಬ ಕಾರ್ಯಕರ್ತನಿಗೂ ಕನಿಷ್ಠ ಸ್ಥಾನ ಕೊಟ್ಟಿಲ್ಲ. ಇನ್ನು ಯಾವ ಕಾರಣಕ್ಕೆ ದಲಿತರು ಪಕ್ಷ ಕಟ್ಟಲು ಬರಬೇಕು ಎಂದರು.

ಶನಿವಾರ ನಡೆದ ಜಿಲ್ಲಾ ಮೋರ್ಚಾ ಸಭೆಯಲ್ಲಿ ಮಾತನಾಡಿದ ಅವರು, ಇದಕ್ಕೂ ಮುನ್ನ ರಾಜ್ಯ ಅಧ್ಯಕ್ಷರು ಕಾರ್ಯಕರ್ತರು ಹೆಚ್ಚು ಬಂದಿಲ್ಲ ಎಂದು ಹೇಳಿದ್ದನ್ನೇ ಉಲ್ಲೇಖಿಸಿ, ಸುಮ್ಮನೆ ಬಂದಿಲ್ಲ ಎಂದು ಹೇಳುವು ದಕ್ಕಿಂತಲೂ ಏಕೆ ಬಂದಿಲ್ಲ ಎಂಬುದನ್ನು ಗಮನಿಸಬೇಕು ಎಂದು ಪ್ರತಿಪಾದಿಸಿದರು.

ಅಧಿಕಾರವಿಲ್ಲ, ಸ್ವತಂತ್ರವಾಗಿ ಸಂಘ ಟನೆ ಮಾಡಲು ಬಿಡುವುದಿಲ್ಲ. ಕನಿಷ್ಠ ವೆಚ್ಚವನ್ನು ಪಕ್ಷ ಭರಿಸುವುದಿಲ್ಲ. ನಮ್ಮದೇ ಸರ್ಕಾರ, ಮಂತ್ರಿಗಳು ಇದ್ದರೂ ನಮ್ಮ ಸಣ್ಣ ಪುಟ್ಟ ಕೆಲಸವೂ ಆಗುವುದಿಲ್ಲ ಎಂದು ಅಸಮಾಧಾನ ತೋಡಿಕೊಂಡರು.

ಜಿಲ್ಲಾ ನಾಯಕರು ನಿಜಕ್ಕೂ ಪಕ್ಷ ಕಟ್ಟುವ ಇರಾದೆ ಇದ್ದರೆ ಅಗತ್ಯ ಸಹಕಾರ ಕೊಡಲಿ. ಇಲ್ಲವಾದರೆ, ಸುಮ್ಮನೆ ಆ ಯತ್ನವನ್ನೇ ಕೈಬಿಡಲಿ. ಇಲ್ಲಿ ಬಂದಿರುವ ಯಾರು ಪಕ್ಷದ ನೌಕರರಲ್ಲ. ಸಂಬಳವನ್ನು ಕೊಡುತ್ತಿಲ್ಲ. ಅವರ ಕೆಲಸವನ್ನು ಅವರು ನೋಡಿಕೊಳ್ಳು ತ್ತಾರೆ ಎಂದು ಖಾರವಾಗಿ ಹೇಳಿದರು.

ಬಳಿಕ ಮಾತನಾಡಿದ ಎಸ್‌ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಅಶ್ವತ್ಥನಾರಾಯಣ ಅವರು, ನಿಜ ಕೆಲವು ಲೋಪಗಳು ಇರುತ್ತವೆ. ನಾವು ಅಣ್ಣ-ತಮ್ಮ, ತಂದೆ-ಮಗನ ಬಾಂಧವ್ಯ ಉಳಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಬಳಿಕ ಮಾತನಾಡಿದ ಜಿಲ್ಲಾ ಅಧ್ಯಕ್ಷ ಎಚ್.ಪಿ. ಮಹೇಶ್, ನಮ್ಮ ಕಡೆ ಯಿಂದಲೂ ಕೆಲವು ಲೋಪಗಳು ಆಗಿರ ಬಹುದು. ಎ.ಆರ್. ಕೃಷ್ಣಮೂರ್ತಿ ಅವರು ಸರ್ಕಾರ ಮತ್ತು ಪಕ್ಷ ಎರ ಡಕ್ಕೂ ಹತ್ತಿರವಾಗಿದ್ದು, ಅವರ ಸಹಕಾ ರದಲ್ಲಿಯೇ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗುವುದು ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.