ADVERTISEMENT

ವೇತನ ಬಿಡುಗಡೆಗಾಗಿ ಕಾರ್ಮಿಕರು ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 6:54 IST
Last Updated 2 ಜುಲೈ 2013, 6:54 IST

ಮಂಡ್ಯ: ಕಾರ್ಮಿಕರಿಗೆ ಕಳೆದ 17 ತಿಂಗಳಿನಿಂದ ವೇತನ ಪಾವತಿ ಮಾಡಿಲ್ಲ. ಕೂಡಲೇ ವೇತನ ಪಾವತಿಸಬೇಕು ಎಂದು ಆಗ್ರಹಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ವಿಲ್ಸನ್ ಡಿಸ್ಟಿಲರೀಸ್ ಕಾರ್ಮಿಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.

ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಎದುರಿಸುತ್ತಿವೆ. ಮಕ್ಕಳ ವಿದ್ಯಾಭ್ಯಾಸ ಮಾಡಿಸುವುದೂ ಕಷ್ಟವಾಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವೇತನ ಪಾವತಿಗೆ ಆಡಳಿತ ಮಂಡಳಿ ಒಪ್ಪಿಕೊಂಡಿತ್ತು. ಆದರೆ, ಇಲ್ಲಿವರೆಗೂ ಪಾವತಿಸಿಲ್ಲ ಎಂದು ದೂರಿದರು.

ಕಾರ್ಮಿಕರ ಭವಿಷ್ಯ ನಿಧಿ ಹಣ ಹಾಗೂ 5 ವರ್ಷಗಳ ಬೋನಸ್ ಬಾಕಿ ನೀಡಬೇಕು. ಮರಣ ಹೊಂದಿದ ಕಾರ್ಮಿಕರ ಪರಿಹಾರ ಹಣ ಪಾವತಿಸಬೇಕು. ರಾಜೀನಾಮೆ ಸಲ್ಲಿಸಿದ ಹಾಗೂ ನಿವೃತ್ತಿ ಹೊಂದಿದವರ ಬಾಕಿ ಹಣ ನೀಡಬೇಕು ಎಂದು ಆಗ್ರಹಿಸಿದರು.

ಕಾರ್ಖಾನೆ ಆರಂಭಿಸಿ ಉದ್ಯೋಗ ಕೊಡಬೇಕು. ಕೂಡಲೇ ಕಾರ್ಮಿಕರ ಕುಟುಂಬಗಳಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಮುಖಂಡರಾದ ರಾಮಕೃಷ್ಣ, ಸಿ. ಕುಮಾರಿ,  ಎ.ಎಸ್. ಶಿವಕುಮಾರ್, ಕೆ. ದಿನೇಶ್, ಬಿ.ಕೆ. ಸತೀಶ್, ಮಲ್ಲೇಶ್ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.