ADVERTISEMENT

ಷಡಕ್ಷರನ ಕೃತಿಗಳ ಮರು ಮುದ್ರಣ: ಸಲಹೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 6:30 IST
Last Updated 21 ಫೆಬ್ರುವರಿ 2011, 6:30 IST

ಹಲಗೂರು: ‘ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದ ಕವಿ ಷಡಕ್ಷರ ದೇವನ ಹುಟ್ಟೂರಿನಲ್ಲಿ ಸ್ಮಾರಕ ನಿರ್ಮಾಣ ಮತ್ತು ಅವರ ಕೃತಿಗಳ ಮರು ಮುದ್ರಿಸುವ ಕಾರ್ಯ ಸರ್ಕಾರ ಮಾಡಬೇಕಿದೆ ಎಂದು ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮಪಂಡಿತಾರಾಧ್ಯ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ಸಮೀಪದ ಧನಗೂರು ವೀರಸಿಂಹಾ ಸನ ಸಂಸ್ಥಾನ ಮಠದ ಆವರಣದಲ್ಲಿ ಶನಿವಾರ ನಡೆದ ಜನ ಜಾಗೃತಿ ಭಾವೈಕ್ಯ ಸಾಹಿತ್ಯ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮೇರು ಕವಿ ಷಡಕ್ಷರದೇವರ ಹುಟ್ಟೂರಿನ ಬಗ್ಗೆ ಭಕ್ತರು, ವಿದ್ಯಾ ವಂತರು ತೋರಿಸಿದ ಪ್ರೀತಿಯನ್ನು ಸರ್ಕಾರ ತೋರಿಸಿದರೆ ಇದೊಂದು ದೊಡ್ಡ ಸ್ಮಾರಕವಾಗುತ್ತಿತ್ತು ಎಂದು ಹೇಳಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮಾತನಾಡಿ, ತಮ್ಮ ಅಧಿಕಾರದ ಅವಧಿಯಲ್ಲಿ ಷಡಕ್ಷರಿ ಮಠಕ್ಕೆ ಅನುದಾನ ನೀಡದ ಬಗ್ಗೆ ವಿಷಾದವಿದೆ.ವಿಧಾನ ಪರಿಷತ್ ಸದಸ್ಯರು ಸ್ವಲ್ಪ ಹಣ ನೀಡಿರುವುದು ಸಮಾಧಾನ ತಂದಿದೆ ಎಂದರು.ಅಖಿಲ ಭಾರತ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ವಾಗೀಶ್‌ಪ್ರಸಾದ್, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಅಜೀಂ, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿದರು.

ಮಾಜಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಮಾತನಾಡಿ, ಧರ್ಮ ಗುರುಗಳು ಸಮಾಜ ತಿದ್ದಬೇಕು. ಸಮಾಜ ರಾಜಕಾರಣಿಗಳಿಗೆ ಬುದ್ಧಿ ಕಲಿಸುತ್ತದೆ ಎಂದು ಬಿಜೆಪಿ ಸರ್ಕಾರ ಹೊರಹಾಕಿದ ಕ್ರಮವನ್ನು ಮಾರ್ಮಿಕವಾಗಿ ಪ್ರಸ್ತಾಪಿಸಿದರು.ನೂತನ ಜಿಪಂ/ತಾಪಂ ಸದಸ್ಯರನ್ನು ಸನ್ಮಾನಿಸಲಾಯಿತು. ವೀರಸಿಂಹಾಸನ ಸಂಸ್ಥಾನ ಮಠದ ಮುಮ್ಮಡಿ ಷಡಕ್ಷರ ದೇಶಿಕೇಂದ್ರ ಶಿವಾಚಾರ್ಯಸ್ವಾಮೀಜಿ ನೇತೃತ್ವ ವಹಿಸಿದ್ದರು. ಜಿಪಂ ಉಪಾಧ್ಯಕ್ಷೆ ಜಯಲಕ್ಷ್ಮಮ್ಮ, ಸಾಹಿತಿ ತೈಲೂರು ವೆಂಕಟಕೃಷ್ಣ, ಗ್ರಾಪಂ ಅಧ್ಯಕ್ಷ ಸಾದಿಕ್ ಪಾಷ, ಉಪಾಧ್ಯಕ್ಷ ದೊಡ್ಡಸ್ವಾಮಿ, ಶಿಖಾವಾಗೀಶ್ ಪ್ರಸಾದ್, ತಾಪಂ ಸದಸ್ಯರಾದ ಶಾರದಮ್ಮ, ಸುಮಿತ್ರ ಶಿವಮಾದೇ ಗೌಡ, ಪ್ರಕಾಶ್, ವಸಂತ, ರಾಧಾ, ಚಿಕ್ಕಲಿಂಗಯ್ಯ, ಮಹದೇವು, ರತ್ನಮ್ಮ, ಎಚ್.ಎನ್.ರಾಮಚಂದ್ರ, ಮುಖಂಡ ಎಂ.ಸಿ.ವೀರೇಗೌಡ, ಜಿಲ್ಲಾ ಬಿ.ಜೆ.ಪಿ ಯುವಮೋರ್ಚಾ ಅಧ್ಯಕ್ಷ ಎಚ್. ಆರ್.ಅಶೋಕ್‌ಕುಮಾರ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕೆಂಚಪ್ಪ, ತಾಯೂರು ವಿಠಲಮೂರ್ತಿ, ವೀರಶೈವ ಯುವ ಸಮಾಜದ ಎವಿಟಿಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.