ADVERTISEMENT

ಸೂಕ್ತ ಪರಿಹಾರಕ್ಕೆ ಜಮೀನು ಮಾಲೀಕರ ಪಟ್ಟು

​ಪ್ರಜಾವಾಣಿ ವಾರ್ತೆ
Published 10 ಜೂನ್ 2011, 9:55 IST
Last Updated 10 ಜೂನ್ 2011, 9:55 IST

ಮಳವಳ್ಳಿ: ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಸ್ವಾಧಿನಪಡಿಸಿಕೊಂಡಿರುವ ಜಮೀನು ಮಾಲೀಕರಿಗೆ ಸೂಕ್ತ ಪರಿಹಾರ ನೀಡುವವರೆಗೆ ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿದ ಘಟನೆ ಗುರುವಾರ ತಾಲ್ಲೂಕಿನ ನೆಟ್ಕಲ್ ಬಳಿ ನಡೆದಿದೆ.

ಬೆಂಗಳೂರು ನಗರಕ್ಕೆ ತಾಲ್ಲೂಕಿನ ಕಾವೇರಿ ನದಿಯಿಂದ ಕುಡಿಯುವ ನೀರು  ಪೂರೈಕೆ ಮಾಡುವ ನಾಲ್ಕನೆ ಹಂತದ ಕಾಮಗಾರಿ ತಾಲ್ಲೂಕಿನ ನೆಟ್ಕಲ್ ಬಳಿ ನಡೆಯುತ್ತಿದೆ. ಈ ಕಾಮಗಾರಿಗೆ ಪೈಪುಗಳನ್ನು ಅಳವಡಿಸಲು ಸ್ವಾಧೀನಪಡಿಸಿಕೊಂಡಿರುವ ಜಮೀನು ಮಾಲೀಕರಿಗೆ ಪರಿಹಾರ ನೀಡದೆ ನಡೆಸುತ್ತಿದ್ದು ಕೂಡಲೇ ಪರಿಹಾರ ನೀಡಬೇಕು ಎಂದು ಜಮೀನು ಮಾಲೀಕರು ಒತ್ತಾಯಿಸಿದರು.

`ಕೃಷಿ ಕೂಲಿಕಾರರ ಸಂಘದ ಮುಖಂಡರಾದ ಪುಟ್ಟಮಾದು, ದಸಂದ ಎಸ್.ಎಂ.ಕೃಷ್ಣ, ಜಮೀನು ಮಾಲೀಕ ಬಸವರಾಜು ಸೇರಿದಂತೆ ಇನ್ನೂ ಹಲವರು ಸೇರಿ ಸೂಕ್ತ ಪರಿಹಾರ ನೀಡುವವರೆಗೆ ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು. ಈ ಕಾಮಗಾರಿಗೆ 2006 ರಿಂದಲೇ ಭೂಸ್ವಾಧೀನ ಪಡಿಸಿಕೊಂಡಿದ್ದು, ಕೆಲವು ಕಡೆ ಡಿನೋಟಿಫೈ ಮಾಡಿದ್ದರೂ ಪರಿಹಾರ ನೀಡದೆ ಕಾಮಗಾರಿ ನಡೆಸಲಾಗುತ್ತಿದೆ. ನೆಟ್ಕಲ್ ಗ್ರಾಮದ ಬಸಮ್ಮ ಬಸವಯ್ಯ, ಸರೋಜಮ್ಮ, ರಾಜಮ್ಮ, ಚಿಕ್ಕಮಾದಯ್ಯ, ಕುಂಡಿಹುಚ್ಚಯ್ಯ, ಗುರುವಯ್ಯ ಸಿದ್ದಮ್ಮ ಸೇರಿದಂತೆ ಇನ್ನೂ ಹಲವು ದಲಿತರ ಜಮೀನನ್ನು ಡಿನೋಟಿಪೈ ಮಾಡದೆ ಅತಿಕ್ರಮವಾಗಿ ಪೈಪ್ ಅಳವಡಿಸುವ ಕಾಮಗಾರಿ ನಡೆಸಲಾಗುತ್ತದೆ. ಈ ಜಮೀನನ್ನೆ ನಂಬಿ ಜೀವನ ಮಾಡುತ್ತಿದ್ದ ಜನರು ಬೀದಿಪಾಲಾಗುವಂತಾಗಿದೆ. ಕೂಡಲೆ ಜಮೀನಿಗೆ ಸೂಕ್ತ ಪರಿಹಾರ ನೀಡಿ ಕಾಮಗಾರಿ ನೀಡುವಂತೆ ಆಗ್ರಹಿಸಿದರು.

ಸ್ಥಳದಲ್ಲಿದ್ದ ಬೆಂಗಳೂರು ಜಲಮಂಡಳಿ ಸಹಾಯಕ ಕಾರ್ಯನಿರ್ವಾಹಕ  ಎಂಜಿನಿಯರ್ ರಾಜಶೇಖರ್ ಅವರು ಮಾತನಾಡಿ, ನೆಟ್ಕಲ್ ಗ್ರಾಮದ ಕೆಲವು ವ್ಯಕ್ತಿಗಳಿಗೆ ಸೇರಿದ ಜಮೀನನ್ನು ಡಿನೋಟಿಪೈ ಮಾಡಿಲ್ಲ, ಜಮೀನು ಮಾಲೀಕರ ಒಪ್ಪಿಗೆ ಪಡೆದು ಕಾಮಗಾರಿ ನಡೆಸಲಾಗುತ್ತಿದೆ ಎಂದರು. ನಂತರ ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಕಾಮಗಾರಿ ನಡೆಸುವುದಾಗಿ ಅಲ್ಲಿಯವರೆಗೂ ಕಾಮಗಾರಿ ಸ್ಥಗಿತಗೊಳಿಸುವುದಾಗಿ ತಿಳಿಸಿ, ಕಾಮಗಾರಿ ನಡೆಸುತ್ತಿದ್ದ ವಾಹನಗಳನ್ನು ತೆಗೆದುಕೊಳ್ಳುವುದಾಗಿ ಹೇಳಿ ತೆರಳಿದರು.

ಕೃಷಿ ಕೂಲಿಕಾರರ ಸಂಘದ ಎಂ.ಪುಟ್ಟಮಾದು, ಕೆ.ಬಸವರಾಜು, ಮುಖಂಡರಾದ ಎಸ್.ಎಂ.ಕೃಷ್ಣ, ಶಿವರಾಜು, ನಾರಾಯಣ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.