ADVERTISEMENT

ರೈತರನ್ನು ಕಡೆಗಣಿಸಿದರೆ ಅರ್ಥ ವ್ಯವಸ್ಥೆಗೆ ಧಕ್ಕೆ: ಶ್ರೀಮುರಳಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 19:26 IST
Last Updated 19 ಜನವರಿ 2019, 19:26 IST
ಶ್ರೀರಂಗಪಟ್ಟಣದ ಸ್ನಾನಘಟ್ಟದ ಬಳಿ ಚಲನಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದ ನಟ ಶ್ರೀಮುರುಳಿ ರೈತ ನಾಯಕ ಕೆ.ಎಸ್.ನಂಜುಂಡೇಗೌಡರ ಜತೆ ಚರ್ಚಿಸಿದರು
ಶ್ರೀರಂಗಪಟ್ಟಣದ ಸ್ನಾನಘಟ್ಟದ ಬಳಿ ಚಲನಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದ ನಟ ಶ್ರೀಮುರುಳಿ ರೈತ ನಾಯಕ ಕೆ.ಎಸ್.ನಂಜುಂಡೇಗೌಡರ ಜತೆ ಚರ್ಚಿಸಿದರು   

ಶ್ರೀರಂಗಪಟ್ಟಣ: ಅನ್ನದಾತರನ್ನು ಕಡೆಗಣಿಸಿದರೆ ಆಹಾರ ಸಂಸ್ಕೃತಿ ಮತ್ತು ಆರ್ಥ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ರೈತರನ್ನು ಯಾರೂ ಕಡೆಗಣಿಸಬಾರದು ಎಂದು ನಟ ಶ್ರೀಮುರಳಿ ಹೇಳಿದರು.

ಇಲ್ಲಿನ ಐತಿಹಾಸಿಕ ಸ್ನಾನಘಟ್ಟದ ಬಳಿ ಚಿತ್ರವೊಂದರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಶ್ರೀಮುರಳಿ ಅವರು ರೈತ ನಾಯಕ ಕೆ.ಎಸ್. ನಂಜುಂಡೇಗೌಡ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕು. ಆದರೆ, ಯಾವುದಕ್ಕೂ ನಿಖರವಾದ ಬೆಲೆ ಇಲ್ಲ. ಹೋರಾಟ ಮಾಡಿ ಬೆಲೆ ಕೇಳುವ ಸ್ಥಿತಿ ಬಂದಿದೆ. ಸರ್ಕಾರಗಳು ಕೃಷಿಯನ್ನು ಆದ್ಯತೆಯ ಕ್ಷೇತ್ರ ಎಂದು ಪರಿಗಣಿಸಬೇಕು. ರೈತ ನಾಯಕರು ಒಗ್ಗೂಡಿ ಕೃಷಿಕರಪರ ದನಿ ಎತ್ತಬೇಕು ಎಂದು ಆಗ್ರಹಿಸಿದರು.

ADVERTISEMENT

ಕೆ.ಎಸ್. ನಂಜುಂಡೇಗೌಡ ಅವರು ರೈತ ಚಳವಳಿಯ ಹಿನ್ನೆಲೆ ಬಗ್ಗೆ ಶ್ರೀಮುರಳಿ ಅವರಿಗೆ ವಿವರಿಸಿದರು.

ಸರ್ಕಾರಗಳು ರೈತರನ್ನು 3ನೇ ದರ್ಜೆಯ ನಾಗರಿಕರಂತೆ ನಡೆಸಿ ಕೊಳ್ಳುತ್ತಿವೆ. ಎಲ್ಲವನ್ನೂ ಕೇಳಿ ಪಡೆಯ ಬೇಕಾಗಿದೆ. ಅಧಿಕಾರಸ್ಥರು ಹುಸಿ ಪ್ರೀತಿ ತೋರಿಸುತ್ತಾರೆ. ಚುನಾವಣೆ ವೇಳೆ ಹೇಳಿದಂತೆ ನಂತರ ನಡೆದು ಕೊಳ್ಳುವುದಿಲ್ಲ ಎಂದರು.

ಹೊಸಉಂಡವಾಡಿ ಮಹದೇವು, ಕರವೇ ಬಸವರಾಜು, ಆಯಿಲ್ ಮಂಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.