ಮಂಡ್ಯ: ವಿವಿಧ ಸಂಘಟನೆಯ ಮುಖಂಡರು ನಗರದ 100 ಅಡಿ ರಸ್ತೆಗೆ ಬಿ.ಆರ್.ಅಂಬೇಡ್ಕರ್ ಅವರ ಹೆಸರಿರುವ ನಾಮಫಲಕದ ಕಲ್ಲನ್ನು ಸೋಮವಾರ ನೆಟ್ಟರು.
ಸಮಾನ ಮನಸ್ಕರ ವೇದಿಕೆ ಸಂಚಾಲಕ ಲಕ್ಷ್ಮಣ್ ಚೀರನಹಳ್ಳಿ ಮಾತನಾಡಿ, ‘1975ರಿಂದಲೂ ನೂರಡಿ ರಸ್ತೆಗೆ ‘ಅಂಬೇಡ್ಕರ್ ರಸ್ತೆ’ ಎಂದು ನಾಮಕರಣ ಮಾಡಲು ಅಂದಿನ ನಗರಸಭೆಯು ನಿರ್ಣಯ ಮಾಡಿ ಅಂಗೀಕರಿಸಿತ್ತು. ಆದರೆ, ರಾಜಕೀಯ ಪಕ್ಷಗಳ ಇಚ್ಛಾಶಕ್ತಿಯ ಕೊರತೆಯಿಂದ ಅದು ಸಾಧ್ಯವಾಗಿರಲಿಲ್ಲ’ ಎಂದು ಆರೋಪಿಸಿದರು.
ಮಂಡ್ಯದ ಸಮಾನ ಮನಸ್ಕರ ವೇದಿಕೆ, ದಲಿತ, ಪ್ರಗತಿಪರ ಸಂಘಟನೆಗಳ ಜೊತೆ ಈಚೆಗೆ ಅಂಬೇಡ್ಕರ್ ರಸ್ತೆ ಎಂಬ ಹೆಸರಿನ ಸ್ಟಿಕ್ಕರ್‌ಗಳನ್ನು ಅಂಟಿಸಿ ನಗರಾಡಳಿತದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಆದರೆ ಈ ಸ್ಟಿಕ್ಕರ್‌ಗಳನ್ನು ಪೋಲಿಸರು ರಾತ್ರೋರಾತ್ರಿ ತರವುಗೊಳಿಸಿದ್ದಾರೆ. ಈ ಕ್ರಮಕ್ಕೆ ಸೆಡ್ಡು ಹೊಡೆದು ಅಂಬೇಡ್ಕರ್ ನಾಮಫಲಕದ ಕಲ್ಲು ನೆಟ್ಟಿದ್ದೇವೆ’ ಎಂದು ತಿಳಿಸಿದರು.
ವಿವಿಧ ಸಂಘಟನೆಯ ಮುಖಂಡರಾದ ಎಂ.ವಿ.ಕೃಷ್ಣ, ಶಂಕರಪ್ಪಗೌಡ ನರಸಿಂಹಮೂರ್ತಿ, ಹನಕೆರೆ ಅಭಿಗೌಡ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.