ಕಿಕ್ಕೇರಿ ಹೋಬಳಿಯ ಚಿಕ್ಕಳಲೆ ಗ್ರಾಮದಲ್ಲಿ ಭಾನುವಾರ ಅಡಿಕೆ, ತೆಂಗಿನ ಗಿಡಗಳನ್ನು ಕಡಿದು ಹಾಕಿರುವುದು
ಕಿಕ್ಕೇರಿ: ಹೋಬಳಿಯ ಚಿಕ್ಕಳಲೆ ಗ್ರಾಮದ ರೈತ ಮೋಹನ್ ಅವರಿಗೆ ಸೇರಿದ 2 ಎಕರೆ ಜಮೀನಿನಲ್ಲಿ ಬೆಳೆದಿದ್ದ ಅಡಿಕೆ ಗಿಡ, ತೆಂಗಿನ ಗಿಡಗಳನ್ನು ಕಿಡಿಗೇಡಿಗಳು ಭಾನುವಾರ ರಾತ್ರಿ ಕಡಿದು ಹಾಕಿದ್ದಾರೆ.
200 ಅಡಿಕೆ ಗಿಡಗಳನ್ನು 2 ವರ್ಷಗಳ ಹಿಂದೆ ಹಾಕಲಾಗಿತ್ತು. ಅವುಗಳಲ್ಲಿ 35ಕ್ಕೂ ಹೆಚ್ಚು ಅಡಿಕೆ 5 ತೆಂಗಿನ ಗಿಡಗಳನ್ನು ನಾಶಪಡಿಸಲಾಗಿದೆ.
ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.