ADVERTISEMENT

ಮತದಾರರ ಭೇಟಿಗೆ ಕಾಯುವ ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 6:05 IST
Last Updated 25 ಡಿಸೆಂಬರ್ 2020, 6:05 IST
ನಾಗಮಂಗಲ ಗ್ರಾ.ಪಂ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಅಭ್ಯರ್ಥಿ ಮತ್ತು ಬೆಂಬಲಿಗರು
ನಾಗಮಂಗಲ ಗ್ರಾ.ಪಂ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಅಭ್ಯರ್ಥಿ ಮತ್ತು ಬೆಂಬಲಿಗರು   

ನಾಗಮಂಗಲ: ತಾಲ್ಲೂಕಿನಲ್ಲಿ ನಡೆಯ ಲಿರುವ ಗ್ರಾ.ಪಂ ಚುನಾವಣೆಯ ಅಭ್ಯರ್ಥಿ ಗಳು ಮತದಾರರನ್ನು ಭೇಟಿಯಾಗಲು ಕೊಂಚ ಕಷ್ಟಪಡುವಂತಾಗಿದೆ.

ಜನರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಅಭ್ಯರ್ಥಿಗಳ ಅನುಕೂಲದ ಸಮಯ ದಲ್ಲಿ ಸಾರ್ವಜನಿಕರ ಮನವೊಲಿಸಲು ಸಾಧ್ಯವಾಗುತ್ತಿಲ್ಲ. ಮತದಾರರ ಸಮಯ ವನ್ನು ತಿಳಿದುಕೊಂಡು ಸಂಜೆ ಅಥವಾ ಮುಂಜಾನೆ ಅವರ ಮನೆಬಾಗಿಲಿಗೆ ತೆರಳಿ ಮತ ಯಾಚಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ತಾಲ್ಲೂಕು ಪ್ರತಿ ವರ್ಷ ಬರಕ್ಕೆ ತುತ್ತಾಗುಗುತ್ತಿದ್ದರೂ ಈ ಬಾರಿ ಉತ್ತಮ ಮಳೆ ಆಗಿರುವುದರಿಂದ ಹಾಗೂ ಹೇಮಾವತಿ ಜಲಾಶಯದಿಂದ ಕೆರೆ ಕಟ್ಟೆಗಳಿಗೆ ನೀರು ತುಂಬಿಸಿದ ಕಾರಣ ರೈತರು ಈ ಬಾರಿ ಬಿತ್ತನೆ ಮಾಡಿದ್ದರು. ಉತ್ತಮ ಬೆಳೆ ಬಂದಿರುವವುದರಿಂದ ರೈತರು ಬೆಳಿಗ್ಗೆಯೇ ಹೊಲಗಳತ್ತ ತೆರಳಿದರೆ ವಾಪಾಸಾಗುವುದು ಸಂಜೆ ಬಳಿಕವೇ. ಈ ಮಧ್ಯೆ ಅಭ್ಯರ್ಥಿಗಳು ಪ್ರಚಾರಕ್ಕೆ ಹೋದರೆ ಗ್ರಾಮಗಳಲ್ಲಿರುವ ಮನೆ ಬಾಗಿಲಿಗೆ ಬೀಗ ಹಾಕಿರುತ್ತದೆ. ಈ ಕಾರಣದಿಂದಾಗಿ ಅಭ್ಯರ್ಥಿ ಗಳು ಮತದಾರರ ಸಮಯಕ್ಕೆ ಹೊಂದಿ ಕೊಂಡು ಅವರ ಬಳಿ ತೆರಳುತ್ತಿದ್ದಾರೆ.

ADVERTISEMENT

ಕೆಲ ಅಭ್ಯರ್ಥಿಗಳು ಮತ್ತು ಬೆಂಬಲಿಗರು ರೈತರ ಜಮೀನುಗಳ ಬಳಿಗೇ ತೆರಳಿ ಅಲ್ಲಿ ಮತ ಬೇಟೆಯಲ್ಲಿ ತೊಡಗುತ್ತಿದ್ದಾರೆ. ನಗರಗಳಿಗೆ ಕೆಲಸಕ್ಕೆ ಹೋಗಿದ್ದವರ ಮತ ಸೆಳೆಯಲು ಅಭ್ಯರ್ಥಿಗಳು ಮತ್ತು ಬೆಂಬಲಿಗರು ಫೋನ್‌ ಕರೆ, ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ. ಅಭ್ಯರ್ಥಿಗಳ ನಡುವೆಯೂ ಪೈಪೋಟಿ ಶುರುವಾಗಿದೆ.

ಲಾಕ್‌ಡೌನ್‌ನಲ್ಲಿ ಬರಬೇಡಿ ಎಂದವರೇ ಈಗ ಬನ್ನಿ ಎನ್ನುತ್ತಾರೆ: ಕೋವಿಡ್ ಸೋಂಕು ವೇಗವಾಗಿ ಹರಡುತ್ತಿದ್ದ ಪ್ರಾರಂಭದಲ್ಲಿ ಗ್ರಾಮಗಳಿಗೆ ಬರಲು ಮುಂದಾದಾಗ ಗ್ರಾಮಕ್ಕೆ ಬರ ಬೇಡಿ, ಅಲ್ಲೇ ಇರುವುದು ‌ಕ್ಷೇಮ ಎಂದು ಸಂಬಂಧಿಕರು ಸೇರಿದಂತೆ ಗ್ರಾಮಸ್ಥರು ತಡೆಯುತ್ತಿದ್ದರು. ಆದರೆ, ಈಗ ಚುನಾವಣೆಗೆ ಸ್ಪರ್ಧಿಸಿರುವ ಕೆಲ ಅಭ್ಯರ್ಥಿಗಳು ಕರೆ ಮಾಡಿ ಮತ ಹಾಕುವಂತೆ ಒತ್ತಾಯಿಸುತ್ತಿದ್ದಾರೆ. ಕೋವಿಡ್ ಬಗ್ಗೆ ಇದ್ದ ಅಲ್ಪಸ್ವಲ್ಪ ಭಯವೂ ಚುನಾವಣೆ ಯಿಂದಾಗಿ ಮಾಯವಾಗಿದೆ ಎಂದು ಬೆಂಗಳೂರಿನಲ್ಲಿ ಉದ್ಯೋಗಿ, ತಾಲ್ಲೂಕಿನ ಯುವಕ ಅನುಭವ ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.