ADVERTISEMENT

ಮಂಡ್ಯ: ಉಗ್ರರ ದಾಳಿ ಖಂಡಿಸಿ ಮೇಣದ ಬತ್ತಿ ಹಿಡಿದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 16:17 IST
Last Updated 23 ಏಪ್ರಿಲ್ 2025, 16:17 IST
ಬಿಜೆಪಿ ಕಾರ್ಯಕರ್ತರು ಮಂಡ್ಯ ನಗರದ ಮಹಾವೀರ ವೃತ್ತದಲ್ಲಿ ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು
ಬಿಜೆಪಿ ಕಾರ್ಯಕರ್ತರು ಮಂಡ್ಯ ನಗರದ ಮಹಾವೀರ ವೃತ್ತದಲ್ಲಿ ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು   

ಮಂಡ್ಯ: ಕಾಶ್ಮೀರದ ಪಹಲ್ಗಾಮ್‌ ಬಳಿಯ ಬೈಸರನ್‌ ಕಣಿವೆಯಲ್ಲಿ ಅಮಾಯಕರ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿ ವಿರೋಧಿಸಿ ನಗರದಲ್ಲಿ ವಿವಿಧ ಸಂಘಟನೆಯ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಮೇಣದ ಬತ್ತಿ ಹಿಡಿದು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ವಿವಿಧ ಸಂಘಟನೆ ಪ್ರತಿಭಟನೆ: ನಗರದ ಜೆ.ಸಿ. ವೃತ್ತದ ಬಳಿ ಕರುನಾಡ ಸಂಘಟನೆ, ಮಹಿಳಾ ಮುನ್ನಡೆ, ಕರ್ನಾಟಕ ಜನಶಕ್ತಿ ಸಂಘಟನೆ, ಜಾಗೃತ ಕರ್ನಾಟಕ, ವೈಜ್ಞಾನಿಕ ವಿಜ್ಞಾನ ಪರಿಷತ್‌ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಮೇಣದ ಬತ್ತಿ ಹಿಡಿದುಕೊಂಡು ಪ್ರತಿಭಟನೆ ನಡೆಸುವ ಮೂಲಕ ಪಹಲ್ಗಾಮ್‌ ಘಟನೆಯನ್ನು ತೀವ್ರವಾಗಿ ಖಂಡಿಸಿದರು.

2019ರಲ್ಲಿ ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರು ನಡೆಸಿದ ಭೀಕರ ಬಾಂಬ್ ಸ್ಫೋಟದಲ್ಲಿ 40 ಮಂದಿ ಭಾರತೀಯ ಸೈನಿಕರು ಬಲಿಯಾದರು. 2020ರ ಮೇನಲ್ಲಿ ಗಲ್ವಾನ್ ಕಣಿವೆಯಲ್ಲಿ ಚೀನಾ ನಡೆಸಿದ ದಾಳಿಯಲ್ಲಿ ನಮ್ಮ ದೇಶದ 20 ಸೈನಿಕರು ವೀರ ಮರಣವನ್ನಪ್ಪಿದರು. ಈ ಎರಡೂ ಪ್ರಕರಣಗಳಲ್ಲಿ ಹತ್ಯೆಗೀಡಾದ ಸೈನಿಕರಿಗೆ ಇನ್ನೂ ಸರಿಯಾದ ನ್ಯಾಯ ಸಿಕ್ಕಿಲ್ಲ. ಈಗ ಕಾಶ್ಮೀರದ ಪಹಲ್ಗಾಮ್‌ನಲ್ಲಿ 28 ಮಂದಿ ಮುಗ್ಧ ನಾಗರಿಕರು ಬಲಿಯಾಗಿದ್ದಾರೆ. ಇವರೆಲ್ಲ ಹತ್ಯೆಯ ಹಿಂದೆ ಭದ್ರತಾ ವೈಫಲ್ಯವೂ ಇದ್ದು, ಈ ಬಗ್ಗೆ ಆಡಳಿತರೂಢರಿಗೆ ಪ್ರಶ್ನೆ ಕೇಳಲೇಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಮುಖಂಡರಾದ ಸುನಂದಾ ಜಯರಾಂ, ಕೃಷ್ಣಪ್ರಕಾಶ್‌, ಬಿ.ಟಿ. ವಿಶ್ವನಾಥ್‌, ನಾಗಣ್ಣಗೌಡ, ವಿನಯ್‌, ರಾಜೇಂದ್ರಬಾಬು, ಸಿದ್ದರಾಜು, ಪೂರ್ಣಿಮಾ, ಮಂಗಲ ಲಂಕೇಶ್‌ ಭಾಗವಹಿಸಿದ್ದರು.

ಬಿಜೆಪಿ ಫಂಜಿನ ಮೆರವಣಿಗೆ: ನಗರದ ಮಹಾವೀರ ವೃತ್ತದಲ್ಲಿ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು ಉಗ್ರರ ವಿರುದ್ಧ ಘೋಷಣೆ ಕೂಗಿ ಮೇಣದ ಬತ್ತಿ ಹಿಡಿದು ಜೆ.ಸಿ.ವೃತ್ತದವರೆಗೂ ಮೆರವಣಿಗೆ ನಡೆಸಿದರು.

ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್‌, ಮುಖಂಡರಾದ ಶಿವಕುಮಾರ ಆರಾಧ್ಯ, ಭೀಮೇಶ್‌, ಮಹಂತಪ್ಪ, ಚಂದ್ರು, ರಮೇಶ್‌, ವೇಂಕಟೇಶ್‌, ನಂದೀಶ್‌, ಸಚಿನ್‌ ಭಾಗವಹಿಸಿದ್ದರು.

ಕಾಶ್ಮೀರದ ನರಮೇಧ ಖಂಡಿಸಿ ಮಂಡ್ಯ ನಗರದ ಜೆ.ಸಿ. ವೃತ್ತದ ಬಳಿ ವಿವಿಧ ಸಂಘಟನೆಯ ಮುಖಂಡರು ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.