ADVERTISEMENT

ಮೇಲುಕೋಟೆ | ಶಾಲೆ ಜಾಗದಲ್ಲಿ ಮನೆ ನಿರ್ಮಾಣ: ಆರೋಪ

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 14:11 IST
Last Updated 8 ಜನವರಿ 2024, 14:11 IST
ಬಳ್ಳಿಘಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಾಗದಲ್ಲಿ   ಗ್ರಾ.ಪ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯನಿಂದ ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ ತಹಶಿಲ್ದಾರಗೆ ದೂರು ಸಲ್ಲಿಸಿದ್ದಾರೆ
ಬಳ್ಳಿಘಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಾಗದಲ್ಲಿ   ಗ್ರಾ.ಪ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯನಿಂದ ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ ತಹಶಿಲ್ದಾರಗೆ ದೂರು ಸಲ್ಲಿಸಿದ್ದಾರೆ   

ಮೇಲುಕೋಟೆ: ‘ಬಳ್ಳಿಘಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಾಗದಲ್ಲಿ ಹಾಲಿ ಸದಸ್ಯನೇ ಮನೆ ನಿರ್ಮಾಣ ಮಾಡುತ್ತಿದ್ದಾರೆ’ ಎಂದು ಗ್ರಾಮಸ್ಥರು ಆರೋಪಿಸಿದ್ದು, ಈ ಸಂಬಂಧ ತಹಶೀಲ್ದಾರ್‌ ಅವರಿಗೆ ದೂರು ಸಲ್ಲಿಸಿದ್ದಾರೆ.

ಪಟೇಲ್ ಜಯರಾಮೇಗೌಡ ಎಂಬುವವರು 20-30 ಸುತ್ತಳತೆ ಜಾಗದಲ್ಲಿ‌ ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಜತೆಗೆ ಮನೆ ನಿರ್ಮಾಣಕ್ಕೆ ಗ್ರಾ.ಪಂ.ನಿಂದ ಅನುಮತಿ ಕೂಡ‌ಪಡೆದಿಲ್ಲ. ಈ ಜಾಗವು ಸರ್ಕಾರಿ‌ ಶಾಲೆ ಸೇರಿದ ಜಾಗವಾಗಿದೆ. ಗ್ರಾ.ಪಂ‌ ಸದಸ್ಯನಾಗಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ತಹಶೀಲ್ದಾರ್ ಶ್ರೇಯಸ್‌, ತಾ.ಪಂ.ಇಒ ಲೋಕೇಶ್ ಮೂರ್ತಿ, ಕ್ಷೇತ್ರ‌ ಶಿಕ್ಷಣಾಧಿಕಾರಿ ಚಂದ್ರಶೇಖರ್ ಅವರಿಗೆ ದೂರು ಸಲ್ಲಿಸಿದ್ದಾರೆ.

ಮನೆ ತೆರವುಗೊಳಿಸಬೇಕು‌, ಇಲ್ಲವಾದರೆ ಗ್ರಾಮಸ್ಥರು ಪ್ರತಿಭಟನೆ ಮಾಡುತ್ತೇವೆ ಎಂದು ಗ್ರಾಮದ ಲೋಕೇಶ್, ಪರಮೇಶ್, ನರಸಿಂಹಮೂರ್ತಿ, ಸೋಮಶೇಖರ್, ರಾಮೇಗೌಡ, ಚೇತನ್, ಪ್ರಸನ್ನ , ಅರುಣ್, ಶ್ರೀನಿವಾಸ್ ಗೌಡ, ವೆಂಕಟೇಶ್ ,ಯೋಗೇಂದ್ರ, ನಾಗೇಂದ್ರ, ಅಭಿಷೇಕ್ , ಪುಟ್ಟರಾಜು ಎಚ್ಚರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.