ಮಂಡ್ಯ: ಶನಿವಾರ ಹೊಸದಾಗಿ 94 ಮಂದಿಯಲ್ಲಿ ಕೋವಿಡ್–19 ದೃಢಪಟ್ಟಿದ್ದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,001ಕ್ಕೆ ತಲುಪಿದೆ.
ಮಂಡ್ಯ ತಾಲ್ಲೂಕಿನ 39, ಕೆ.ಆರ್.ಪೇಟೆ, ನಾಗಮಂಗಲ ತಲಾ 12, ಶ್ರೀರಂಗಪಟ್ಟಣ 12, ಮಳವಳ್ಳಿ 8, ಮದ್ದೂರು 7, ಪಾಂಡವಪುರ ತಾಲ್ಲೂಕಿನ 6 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.
ಕೋವಿಡ್ನಿಂದ ಗುಣಮುಖರಾದ 412 ಮಂದಿಯನ್ನು ವಿವಿಧ ಕೋವಿಡ್ ಕೇರ್ ಕೇಂದ್ರಗಳಿಂದ ಶನಿವಾರ ಬಿಡುಗಡೆ ಮಾಡಲಾಯಿತು. ಮಂಡ್ಯ ತಾಲ್ಲೂಕಿನ 160, ಕೆ.ಆರ್.ಪೇಟೆ 142, ಮಳವಳ್ಳಿ 74, ಶ್ರೀರಂಗಪಟ್ಟಣ 13, ನಾಗಮಂಗಲ ತಾಲ್ಲೂಕಿನ 8 ಮಂದಿಯನ್ನು ಮನೆಗೆ ಕಳುಹಿಸಲಾಯಿತು. ಇಲ್ಲಿಯವರೆಗೆ 7,331 ಮಂದಿ ಗುಣಮುಖರಾಗಿದ್ದು 1574 ಪ್ರಕರಣಗಳು ಸಕ್ರಿಯವಾಗಿವೆ.
ಇಬ್ಬರ ಸಾವು: ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಶನಿವಾರ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ನಿಂದ ಮೃತಪಟ್ಟವರ ಸಂಖ್ಯೆ 92ಕ್ಕೆ ಏರಿಕೆಯಾಗಿದೆ. ಕೆ.ಆರ್.ಪೇಟೆ ತಾಲ್ಲೂಕಿನ 60 ಹಾಗೂ 65 ವರ್ಷ ವಯಸ್ಸಿನ ಇಬ್ಬರು ಮೃತಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.