ADVERTISEMENT

ಆನುವಾಳು; ಡೇರಿ ಮನೆ ಗೋಡೆ ಕುಸಿತ

​ಪ್ರಜಾವಾಣಿ ವಾರ್ತೆ
Published 23 ಮೇ 2022, 3:07 IST
Last Updated 23 ಮೇ 2022, 3:07 IST
ಸತತವಾಗ ಸುರಿದ ಮಳೆಗೆ ತಾಲ್ಲೂಕಿನ ಆನುವಾಳು ಗ್ರಾಮದ ಡೇರಿ ಮನೆ ಗೋಡೆ ಕುಸಿದಿರುವುದನ್ನು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಪರಿಶೀಲಿಸಿದರು. ಮನ್‌ಮುಲ್ ಉಪ ವ್ಯವಸ್ಥಾಪಕ ಆರ್.ಪ್ರಸಾದ್ ಇದ್ದಾರೆ
ಸತತವಾಗ ಸುರಿದ ಮಳೆಗೆ ತಾಲ್ಲೂಕಿನ ಆನುವಾಳು ಗ್ರಾಮದ ಡೇರಿ ಮನೆ ಗೋಡೆ ಕುಸಿದಿರುವುದನ್ನು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಪರಿಶೀಲಿಸಿದರು. ಮನ್‌ಮುಲ್ ಉಪ ವ್ಯವಸ್ಥಾಪಕ ಆರ್.ಪ್ರಸಾದ್ ಇದ್ದಾರೆ   

ಪಾಂಡವಪುರ: ಸತತವಾಗಿ ಸುರಿದ ಮಳೆಯಿಂದ ತಾಲ್ಲೂಕಿನ ಆನುವಾಳು ಗ್ರಾಮದ ಡೇರಿ ಮನೆಯ ಗೋಡೆ ಕುಸಿದುಬಿದ್ದಿದೆ.‌

ಘಟನಾ ಸ್ಥಳಕ್ಕೆ ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

‌ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಸ್ವಂತ ಕಟ್ಟಡವಿರಲಿಲ್ಲ. ಹೀಗಾಗಿ ಆಡಳಿತ ಮಂಡಳಿಯಿಂದ ₹ 6 ಲಕ್ಷಕ್ಕೆ ಮನೆ ಖರೀದಿಸಿ ಡೇರಿ ನಡೆಸುತ್ತಿದ್ದರು. ಮಳೆಯಿಂದಾಗಿ ಅನಾಹುತ ನಡೆದು ಡೇರಿಯ ಸಾಮಗ್ರಿಗಳಿಗೆ ಹಾನಿಯಾಗಿದೆ. ಗ್ರಾಮದಲ್ಲಿ ಡೇರಿ ನೂತನ ಕಟ್ಟಡ ನಿರ್ಮಾಣ ಮಾಡಲು ಮನ್‌ಮುಲ್‌ನಿಂದ ₹ 6 ಲಕ್ಷ ಅನುದಾನ ನೀಡಲಾಗುವುದು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ₹ 2 ಲಕ್ಷ ಸಹಾಯಧನ ಸಿಗಲಿದೆ ಎಂದರು.

ADVERTISEMENT

ಮನ್‌ಮುಲ್ ಉಪ ವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗ ವಿಸ್ತರಣಾಧಿಕಾರಿ ಸಿದ್ದರಾಜು, ಡೇರಿ ಅಧ್ಯಕ್ಷೆ ಸಣ್ಣತಾಯಮ್ಮ, ಉಪಾಧ್ಯಕ್ಷೆ ವೇದಾವತಿ, ನಿರ್ದೇಶಕರಾದ ಮೀನಾಕ್ಷಮ್ಮ, ರೇಣುಕಮ್ಮ, ಗಾಯಿತ್ರಮ್ಮ, ರೇಣುಕ, ಸುಧಾಮಣಿ, ಎ.ಎನ್.ಪುಷ್ಪಾಲತಾ, ಕಾರ್ಯದರ್ಶಿ ಎಸ್.ಎ.ಪ್ರೇಮ, ಗ್ರಾಮದ ಮುಖಂಡರಾದ ಧರ್ಮರಾಜು, ವಿಶ್ವನಾಥ್, ಎ.ಎಂ.ಬಸವರಾಜು, ಪಾಪಯ್ಯ, ಎ.ಎಂ.ಈರಣ್ಣ, ನಿಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.