ADVERTISEMENT

ಕಾಡಾನೆ ದಾಳಿ: ಭತ್ತದ ಫಸಲು ಹಾನಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 5:23 IST
Last Updated 8 ನವೆಂಬರ್ 2020, 5:23 IST
ಹಲಗೂರು ಸಮೀಪದ ದಬ್ಬಹಳ್ಳಿಯಲ್ಲಿ ಆನೆ ದಾಳಿಯಿಂದ ಹಾನಿಯಾದ ಭತ್ತದ ಫಸಲು
ಹಲಗೂರು ಸಮೀಪದ ದಬ್ಬಹಳ್ಳಿಯಲ್ಲಿ ಆನೆ ದಾಳಿಯಿಂದ ಹಾನಿಯಾದ ಭತ್ತದ ಫಸಲು   

ಹಲಗೂರು:ಸಮೀಪದ ದಬ್ಬಹಳ್ಳಿಯಲ್ಲಿ ಕಾಡಾನೆಗಳ ದಾಳಿಯಿಂದಾಗಿ ₹1 ಲಕ್ಷಕ್ಕೂ ಹೆಚ್ಚು ಮೌಲ್ಯದ ಭತ್ತದ ಫಸಲಿಗೆ ಹಾನಿಯಾಗಿದೆ.

ಗ್ರಾಮದ ರೈತ ಪುಟ್ಟರಾಜೇಗೌಡ ಮೂರು ಎಕರೆ ಜಮೀನಿನಲ್ಲಿ ಭತ್ತದ ಬೇಸಾಯ ಮಾಡಿದ್ದರು. ಶಿಂಷಾ ಅರಣ್ಯ ವಲಯದಿಂದ ಬಂದ ಎಂಟು ಕಾಡಾನೆಗಳು ಭತ್ತದ ಫಸಲನ್ನು ತಿಂದು, ತುಳಿದು ಹಾಳು
ಮಾಡಿವೆ.

‘ಸಾಲ ಮಾಡಿ ಬೆಳೆದ ಬೆಳೆ ಕೆಲವೇ ದಿನಗಳಲ್ಲಿ ಕೈ ಸೇರುತ್ತದೆ ಎನ್ನುವಷ್ಟರಲ್ಲೇ ಕಾಡು ಪ್ರಾಣಿಗಳ ದಾಳಿಯಿಂದಾಗಿ ನಾಶವಾಗಿದೆ’ ಎಂದು ಪುಟ್ಟರಾಜೇಗೌಡ ಅಳಲು ತೊಡಿಕೊಂಡರು.

ADVERTISEMENT

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾನಿಗೊಳಗಾದ ಫಸಲಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಹಲಗೂರು ಉಪ ವಲಯ ಅರಣ್ಯಾಧಿಕಾರಿ ನಂದೀಶ್ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.