ಶ್ರೀರಂಗಪಟ್ಟಣ: ಕೆಆರ್‌ಎಸ್ ಅಣೆಕಟ್ಟೆಗೆ 35 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರು ಹರಿದು ಬರುತ್ತಿದ್ದು, ಅಣೆಕಟ್ಟೆಯಿಂದ ನದಿಗೆ ನೀರು ಬಿಡುಗಡೆ ಮಾಡಿದರೆ ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಂಭವವಿದ್ದು, ತಾಲ್ಲೂಕಿನ ದೊಡ್ಡೇಗೌಡನಕೊಪ್ಪಲು ಬಳಿಯ ಗೌತಮ ಕ್ಷೇತ್ರ ನಡುಗಡ್ಡೆಯಿಂದ ಈಚೆ ಬರುವಂತೆ ಗಜಾನನ ಸ್ವಾಮೀಜಿ ಅವರಿಗೆ ತಹಶೀಲ್ದಾರ್ ಪರಶುರಾಮ ಸತ್ತಿಗೇರಿ ಸೂಚಿಸಿದರು.
‘ಪಟ್ಟಣದ ಮಿನಿ ವಿಧಾನಸೌಧಕ್ಕೆ ಗಜಾನನ ಸ್ವಾಮೀಜಿ ಅವರನ್ನು ಗುರುವಾರ ಕರೆಸಿ ಮಾತುಕತೆ ನಡೆಸಿದರು. ಗೌತಮ ಕ್ಷೇತ್ರದಿಂದ ಹೊರ ಬಂದು ಭಕ್ತರ ಮನೆಯಲ್ಲಿ ಆಶ್ರಯ ಪಡೆದುಕೊಳ್ಳಿ. ಆಗದಿದ್ದರೆ ತಾಲ್ಲೂಕು ಆಡಳಿತ ಕಾಳಜಿ ಕೇಂದ್ರ ತೆರೆದು ನಿಮಗೆ ಆಶ್ರಯ ನೀಡಲಿದೆ’ ಎಂದು ತಹಶೀಲ್ದಾರ್ ತಿಳಿಸಿದರು.
‘ಗೌತಮ ಕ್ಷೇತ್ರದಲ್ಲಿರುವ ಇಬ್ಬರು ಮಾತಾಜಿಯವರನ್ನು ಶುಕ್ರವಾರ ಹೊರಗೆ ಕಳುಹಿಸಲಾಗುತ್ತದೆ. ಕೆಆರ್‌ಎಸ್ ಅಣೆಕಟ್ಟೆಯಿಂದ, ಒಂದು ಲಕ್ಷ ಕ್ಯೂಸೆಕ್‌ಗೂ ಹೆಚ್ಚು ನೀರನ್ನು ನದಿಗೆ ಬಿಡುವ ಸೂಚನೆ ಸಿಕ್ಕ ತಕ್ಷಣ ನಾನೂ ನಡುಗಡ್ಡೆಯಿಂದ ಹೊರಗೆ ಬರುತ್ತೇನೆ’ ಎಂದು ಸ್ವಾಮೀಜಿ ಹೇಳಿದರು.
ಕಳೆದ ವರ್ಷ ಕಾವೇರಿ ನದಿಯಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ಗೌತಮ ಕ್ಷೇತ್ರದ ನಡುಗಡ್ಡೆಯಲ್ಲಿ ಉಳಿದಿದ್ದ ಗಜಾನನ ಸ್ವಾಮೀಜಿ ಮತ್ತು ಇತರರನ್ನು ಹೊರಗೆ ಕರೆ ತರಲು ಹರಸಾಹಸ ನಡೆಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.