ADVERTISEMENT

ಹುತಾತ್ಮರಾದ ವೀರ ಯೋಧರಿಗೆ ಪುಷ್ಪನಮನ

​ಪ್ರಜಾವಾಣಿ ವಾರ್ತೆ
Published 12 ಮೇ 2025, 16:10 IST
Last Updated 12 ಮೇ 2025, 16:10 IST
‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ವೀರ ಯೋಧರ ಭಾವಚಿತ್ರಗಳಿಗೆ ವಿವಿಧ ಸಂಘಟನೆಯ ಮುಖಂಡರು ಹಾಗೂ ಸಾರ್ವಜನಿಕರು ಮಂಡ್ಯ ನಗರದಲ್ಲಿ ಪುಷ್ಪಾರ್ಚನೆ ಮಾಡಿದರು
‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ವೀರ ಯೋಧರ ಭಾವಚಿತ್ರಗಳಿಗೆ ವಿವಿಧ ಸಂಘಟನೆಯ ಮುಖಂಡರು ಹಾಗೂ ಸಾರ್ವಜನಿಕರು ಮಂಡ್ಯ ನಗರದಲ್ಲಿ ಪುಷ್ಪಾರ್ಚನೆ ಮಾಡಿದರು   

ಮಂಡ್ಯ: ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ವೀರ ಯೋಧರ ಭಾವಚಿತ್ರಗಳಿಗೆ ವಿವಿಧ ಸಂಘಟನೆಯ ಮುಖಂಡರು ಹಾಗೂ ಸಾರ್ವಜನಿಕರು ನಗರದಲ್ಲಿ ಪುಷ್ಪ ನಮನ ಸಲ್ಲಿಸಿದರು.

ನಗರದಲ್ಲಿ ಜೆ.ಸಿ. ವೃತ್ತದ ಬಳಿ ಹುತಾತ್ಮರಾದ ವೀರ ಯೋಧರ ಭಾವಚಿತ್ರಗಳನ್ನಿರಿಸಿದ ಕದಂಬ ಸೈನ್ಯ, ಭಾರತೀಯ ಕಿಸಾನ್ ಸಂಘ, ಕದಸಂಸ ಗೌರವ ಸಲ್ಲಿಸಿದರು.

ಹುತಾತ್ಮರಾದ ಲ್ಯಾನ್ಸ್ ನ್ಯಾಯಕ್, ದಿನೇಶ್ ಕುಮಾರ್ ಶರ್ಮಾ, ಹವಾಲ್ದಾರ್ ಸೂರಜ್‌ಸಿಂಗ್, ಸಚಿನ್ ಯಾದವ್ ವಾನಂಜೆ, ಕಮಲ್ ಕಾಂಬೋಜ್, ಅಮಿತ್‌ಚೌದರಿ, ಎಂ. ಮುರಳಿ ನಾಯಕ್, ಸುಬೇದಾರ್ ಮೇಜರ್ ಪವನ್‌ಕುಮಾರ್, ಸಿದ್ದಪ್ಪ ಎಸ್. ಮಾದರ, ಬಿ.ಎಸ್.ಎಫ್. ಇನ್‌ಸ್ಪೆಕ್ಟರ್ ಮೊಹಮ್ಮದ್ ಇಮ್ತಿಯಾಜ್, ಸುಬೇದಾರ್ ಮೇಜರ್ ಪವನ್‌ಕುಮಾರ್, ಐಎಎಸ್ ಅಧಿಕಾರಿ ಸೇರಿ ಐದು ಮಂದಿ ನಾಗರಿಕರಿಗೆ ಹುತಾತ್ಮ ಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ADVERTISEMENT

ಸಾಹಿತಿ ಪ್ರದೀಪ್‌ಕುಮಾರ್ ಹೆಬ್ರಿ ಮಾತನಾಡಿ, ವೀರಮರಣ ಅಪ್ಪಿದ ಯೋಧರು ನಮ್ಮ ದೇಶಕ್ಕೆ ಪ್ರಾಣತ್ಯಾಗ ಮಾಡಿದ್ದಾರೆ. ಜನ್ಮ ಕೊಟ್ಟ ತಂದೆ, ತಾಯಿಗೆ ಮತ್ತು ಕುಟುಂಬದವರಿಗೆ ನಮನ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪಾಕ್‌ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಭಾರತಕ್ಕೆ ಹಸ್ತಾಂತರಿಸಬೇಕು. ಎಲ್ಲ ಉಗ್ರರನ್ನು ಹಸ್ತಾಂತರ ಮಾಡಬೇಕು. ಜೊತೆಗೆ ಪಾಕಿಸ್ತಾನದಲ್ಲಿರುವ ಉಗ್ರ ಶಿಬಿರಗಳನ್ನು ಧ್ವಂಸ ಮಾಡುವಂತೆ ಕೇಂದ್ರ ಸರ್ಕಾರ ದಿಟ್ಟ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಕದಂಬ ಸೈನ್ಯ ರಾಜ್ಯ ಘಟಕದ ಅಧ್ಯಕ್ಷ ಬೇಕ್ರಿ ರಮೇಶ್, ಭಾರತೀಯ ಕಿಸಾನ್ ಸಂಘದ ಪ್ರಾಂತ್ಯ ಅಧ್ಯಕ್ಷ ರಮೇಶರಾಜು ಹಾಡ್ಯ, ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ಅಪ್ಪಾಜಿ, ಮುಖಂಡರಾದ ಜೋಸೆಫ್ ರಾಮು, ಸಲ್ಮಾನ್, ರಾಮು ಚಿಕ್ಕೇಗೌಡನದೊಡ್ಡಿ, ಅಕ್ರಂಪಾಷಾ, ನವೀನ್‌ ಕುಮಾರ್, ಶಿವಣ್ಣ, ರುದ್ರಪ್ಪ, ಸಿದ್ದರಾಜು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.