ADVERTISEMENT

ಭಾರಿ ಮಳೆ: ಧರೆಗುರುಳಿದ ವಿದ್ಯುತ್ ಕಂಬಗಳು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 3:24 IST
Last Updated 10 ಅಕ್ಟೋಬರ್ 2020, 3:24 IST
ಮದ್ದೂರು ಪಟ್ಟಣದ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಭಾರಿ ಮಳೆಯಾದ ಕಾರಣ ಸರ್ ಎಂ.ವಿಶ್ವೇಶ್ವರಯ್ಯನಗರದ ಬಳಿ ಬರುವ ಕೆಮ್ಮಣ್ಣು ನಾಲೆಯ ಬಳಿ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ
ಮದ್ದೂರು ಪಟ್ಟಣದ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಭಾರಿ ಮಳೆಯಾದ ಕಾರಣ ಸರ್ ಎಂ.ವಿಶ್ವೇಶ್ವರಯ್ಯನಗರದ ಬಳಿ ಬರುವ ಕೆಮ್ಮಣ್ಣು ನಾಲೆಯ ಬಳಿ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ   

ಮದ್ದೂರು: ಗುರುವಾರ ರಾತ್ರಿ ಮದ್ದೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುರಿದ ಭಾರಿ ಮಳೆಗೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ.

ಪಟ್ಟಣದ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ 9 ಗಂಟೆಯಿಂದ ಬೆಳಗಿನ ಜಾವದವರೆಗೂ ಭಾರಿ ಮಳೆಯಾದ ಕಾರಣ, ಪಟ್ಟಣದ ಸರ್ ಎಂ.ವಿಶ್ವೇಶ್ವರಯ್ಯನಗರದ ಬಳಿ ಬರುವ ಕೆಮ್ಮಣ್ಣು ನಾಲೆಯ ಬಳಿ ಮರಗಳು ಉರುಳಿವೆ. ಇದರ ಜತೆಗೆ ವಿದ್ಯುತ್ ಕಂಬಗಳು ಕೂಡ ತುಂಡಾಗಿ ಬಿದ್ದ ಪರಿಣಾಮ ಪಟ್ಟಣದ ಹಲವಾರು ಭಾಗಗಳಲ್ಲಿ ಶುಕ್ರವಾರ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಸೆಸ್ಕಾಂನ ಸಿಬ್ಬಂದಿ ಹೊಸದಾಗಿ ವಿದ್ಯುತ್ ಕಂಬಗಳನ್ನು ಹಾಕಿ ಸರಿಪಡಿಸಿದ ನಂತರ ಸಂಜೆಯ ವೇಳೆಗೆ ವಿದ್ಯುತ್ ಪೂರೈಕೆ ಸಮರ್ಪಕವಾಯಿತು.

ಪಟ್ಟಣದ ಎಪಿಎಂಸಿ ಎಳನೀರು ಮಾರುಕಟ್ಟೆ ಬಳಿಯ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ನಗರ 2ನೆ ಹಂತದ ತಗ್ಗು ಪ್ರದೇಶಗಳಿಗೆ ಮಳೆಯ ನೀರು ನುಗ್ಗಿ ಸಾರ್ವಜನಿಕರು ನಡೆದಾಡಲು ಪರದಾಡುವಂತಾಯಿತು, ಪಟ್ಟಣದ ಅಕ್ಕಪಕ್ಕದ ಕೆಲವು ಗ್ರಾಮಗಳಲ್ಲಿಯೂ ಮಳೆಯಿಂದ ಕೆಲವು ಮರಗಳ ಧರೆಗುರುಳಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.