ಕಿಕ್ಕೇರಿ: ಸಮೀಪದ ಹಿರೀಕಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ರತ್ನಮ್ಮ ರಾಮಕೃಷ್ಣ ಅವಿರೋಧವಾಗಿ ಆಯ್ಕೆಯಾದರು.
ರಾಜಮ್ಮ ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು. ರತ್ನಮ್ಮ ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಲೋಕೇಶ್ ಅವಿರೋಧ ಆಯ್ಕೆ ಘೋಷಿಸಿದರು.
ರತ್ನಮ್ಮ ರಾಮಕೃಷ್ಣ ಮಾತನಾಡಿ, ‘ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು’ ಎಂದರು.
ಕೆ.ಆರ್.ಪೇಟೆ ಪುರಸಭೆ ಮಾಜಿ ಸದಸ್ಯ ವಿನೋದ್‌ಕುಮಾರ್, ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪುರುಷೋತ್ತಮ್, ಮುಖಂಡರಾದ ರವೀಂದ್ರಬಾಬು, ಚಿಕ್ಕೋನಹಳ್ಳಿ ಮಂಜುನಾಥ್, ಹಿರೀಕಳಲೆ ಮಂಜುನಾಥ್, ಎಚ್.ಎಂ ರಾಮೇಗೌಡ, ಬಲರಾಮ್, ನಾಗರಾಜ್, ದೇವರಾಜು, ಎಚ್.ಜೆ. ಬಸವರಾಜು, ಗ್ರಾ.ಪಂ ಉಪಾಧ್ಯಕ್ಷ ಟಿ.ಎನ್. ಮಹೇಶ್, ಸದಸ್ಯರಾದ ರಾಜಮ್ಮ, ಮಂಜುನಾಥ್, ಸುಂದ್ರಮ್ಮ, ಪದ್ಮಮ್ಮ, ಪುಷ್ ಲತಾ, ಮಮತ, ಕಾಂತರಾಜು, ನಾಗರಾಜು, ಶಿಲ್ಪಾ, ಮಂಜೇಗೌಡ, ಜಯರಾಮ, ಮಂಜಮ್ಮ, ಶಿವಯ್ಯ, ಸಂತೋಷ್ , ಶಾಂತ, ಮರಿಯಮ್ಮ, ಭಾಗ್ಯಮ್ಮ, ಕಾಳಮ್ಮ, ಪಿಡಿಒ ಎಂ.ಆರ್. ನವೀನ್, ಕಾರ್ಯದರ್ಶಿ ಪಿ.ಬಿ. ರವಿ, ಹಿರಿಕಳಲೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಯುವಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.