ಕಿಕ್ಕೇರಿ: ಪಟ್ಟಣದ ಕೆಪಿಎಸ್ ಶಾಲೆಯಲ್ಲಿ ಶನಿವಾರ ಸಾಮೂಹಿಕ ಯೋಗ ಪ್ರದರ್ಶನ ನೀಡಿ ಸಂಭ್ರಮಿಸಿದರು. ಶಿಕ್ಷಕರು ಮಕ್ಕಳಿಗೆ ವಿವಿಧ ಆಸನಗಳನ್ನು ತಿಳಿಸಿದರು.
ಶಾಲಾ ಕ್ರೀಡಾಂಗಣದಲ್ಲಿ ಅಂತರರಾಷ್ಟೀಯ ಯೋಗದಿನದ ಆರಂಭದಲ್ಲಿ ಯೋಗಮುನಿ ಪತಂಜಲಿ ಮುನಿಗೆ ನಮಿಸಿದರು. ವಿವಿಧ ಆಸನದಲ್ಲಿ ತಲ್ಲೀನರಾಗಿದ್ದರು. ಏಕಕಾಲದಲ್ಲಿ ಮೂಡಿದ ಓಂ ಕಾರ ನಾದ ಮಕ್ಕಳ ಏಕಾಗ್ರತೆಗೆ ಸಾಕ್ಷಿಯಾಯಿತು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಯೋಗ ದಿನಾಚರಣೆಯು ಹೊಸ ಅನುಭವ ನೀಡಿತು.
ಕೆಪಿಎಸ್ ಶಾಲೆಯ ಪದವಿಪೂರ್ವ ಕಾಲೇಜು, ಪ್ರೌಢಶಾಲೆ, ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆ ವಿಭಾಗದ ಉಪನ್ಯಾಸಕರು, ಮುಖ್ಯಶಿಕ್ಷಕರು, ಶಿಕ್ಷಕರು ಭಾಗವಹಿಸಿದ್ದರು. ಹೋಬಳಿಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಯೋಗದಿನಾಚರಣೆನಡೆಯಿತು .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.