ADVERTISEMENT

ಕಿಕ್ಕೇರಿ: ಮಳೆಗಾಗಿ ಪ್ರಾರ್ಥಿಸಿ ಹೊನ್ನಾರು ಸಂಭ್ರಮ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 12:40 IST
Last Updated 11 ಏಪ್ರಿಲ್ 2025, 12:40 IST
ಕಿಕ್ಕೇರಿಯಲ್ಲಿ ರೈತಾಪಿ ಸಮುದಾಯದಿಂದ ಹೊನ್ನಾರು ಸಂಭ್ರಮ ಜರುಗಿತು. ಮುಖಂಡರಾದ ಕಾಯಿ ಶಿವರಾಮೇಗೌಡ, ಮಂಜೇಗೌಡ, ಉಮೇಶ್, ನಾಗೇಗೌಡ ಭಾಗವಹಿಸಿದ್ದರು
ಕಿಕ್ಕೇರಿಯಲ್ಲಿ ರೈತಾಪಿ ಸಮುದಾಯದಿಂದ ಹೊನ್ನಾರು ಸಂಭ್ರಮ ಜರುಗಿತು. ಮುಖಂಡರಾದ ಕಾಯಿ ಶಿವರಾಮೇಗೌಡ, ಮಂಜೇಗೌಡ, ಉಮೇಶ್, ನಾಗೇಗೌಡ ಭಾಗವಹಿಸಿದ್ದರು   

ಕಿಕ್ಕೇರಿ: ಪಟ್ಟಣದ ಉಪ್ಪರಿಗೆ ಬಸವೇಶ್ವರ ಗುಡಿ ಆವರಣದಲ್ಲಿ ರೈತರು ಹೊನ್ನಾರು ಕಟ್ಟಿ ಮಳೆಗಾಗಿ ವರುಣದೇವನ ಪ್ರಾರ್ಥಿಸಿದರು.

ಶುಕ್ರವಾರ ಬಸವಣ್ಣ ಮೂರ್ತಿಗೆ ಅಗ್ರಪೂಜೆ ಸಲ್ಲಿಸಿದರು. ಶುಭ ಸಂಕೇತವಾದ ಎತ್ತುಗಳನ್ನು ತೊಳೆದು, ಕೊಂಬು, ಮೈಗೆ ಎಣ್ಣೆ ಸವರಿ, ನೊಸಲಿಗೆ ಕುಂಕುಮ ಅರಿಸಿನ ತಿಲಕ ಇಟ್ಟರು. ಕೊರಳಿಗೆ ಗೆಜ್ಜೆ ಕಟ್ಟಿ, ಹೂಮಾಲೆ ತೊಡಿಸಿ, ಕೊರಳಿಗೆ ನೊಗ ಕಟ್ಟಿದರು. ರಾಸುಗಳಿಗೆ ಆರತಿ ಎತ್ತಿ, ನೇಗಿಲು ಹೂಡಲಾಯಿತು.

ಬಸವೇಶ್ವರ ಗುಡಿಯ ಸುತ್ತ ಮೂರು ಪ್ರದಕ್ಷಿಣೆಯನ್ನು ಹೊನ್ನಾರು ಸಾಗಿತು. ಗುಡಿಯ ಸುತ್ತ ನೇಗಿಲುವಿನಲ್ಲಿ ಮಳೆ ರೇಖೆ ಮೂಡಿ ರೈತರು ಹರ್ಷೋದ್ಘಾರ ವ್ಯಕ್ತಪಡಿಸಿದರು. ರಾಸುಗಳಿಗೆ ರೋಗರುಜಿನ ಬಾರದಂತೆ, ಗ್ರಾಮದಲ್ಲಿ ಸಮೃದ್ಧಿಯಾಗಿ ಮಳೆ ಬೀಳಲಿ, ಉತ್ತಮ ಬೆಳೆ, ಫಸಲು ಲಭಿಸಲಿ. ರೈತನ ಬದುಕು ಹಸನಾಗಲಿ ಎಂದು ರೈತರು ದೇವರಲ್ಲಿ ಪ್ರಾರ್ಥಿಸಿದರು.

ADVERTISEMENT

ಮುಖಂಡರಾದ ಶಿವರಾಮೇಗೌಡ, ಕಾಯಿ ಮಂಜೇಗೌಡ, ಉಮೇಶ್, ನಾಗೇಗೌಡ, ಶಿವೇಗೌಡ, ತಮಟೆ ವಾದಕ ಚಾಮುಂಡಿ, ನಾಗರಾಜು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.