ADVERTISEMENT

ಬಾಡಿಗೆ, ತೆರಿಗೆ ವಂಚನೆ ಆರೋಪ: ಯೋಗೇಶ್ವರ್‌ ಪುತ್ರಿ ವಿರುದ್ಧ ಕ್ರಮಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 19:23 IST
Last Updated 2 ಅಕ್ಟೋಬರ್ 2021, 19:23 IST
ನಿಶಾ ಯೋಗೇಶ್ವರ್‌
ನಿಶಾ ಯೋಗೇಶ್ವರ್‌   

ಮಂಡ್ಯ: ಗೋದಾಮು ಬಾಡಿಗೆ, ತೆರಿಗೆ ವಂಚನೆ ಆರೋಪ ಎದುರಿಸುತ್ತಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್‌ ಪುತ್ರಿ, ಡೆಕ್ಕನ್‌ ಫೀಲ್ಡ್‌ ಆಗ್ರೋ ಇಂಡಸ್ಟ್ರಿ ಸಿಇಒ ನಿಶಾ ಯೋಗೀಶ್ವರ್‌ ವಿರುದ್ಧ ಕ್ರಮ ಕೈಗೊಳ್ಳಲು ಮದ್ದೂರು ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್‌) ನಿರ್ಧರಿಸಿದೆ.

2018, ಏಪ್ರಿಲ್‌ನಿಂದ ಇಲ್ಲಿಯವರೆಗೆ ಡೆಕ್ಕನ್‌ ಫೀಲ್ಡ್‌ ಆಗ್ರೋ ಇಂಡಸ್ಟ್ರಿ ಗೋದಾಮು ಬಾಡಿಗೆ, ಖಾಲಿ ಆವರಣದ ನೆಲಬಾಡಿಗೆ ಪಾವತಿಸದೆ ವಂಚಿಸಿದೆ. ಸೆಪ್ಟೆಂಬರ್‌ ಅಂತ್ಯದವರೆಗೆ ₹ 36 ಲಕ್ಷ ಬಾಡಿಗೆ, ಶೇ 18 ಜಿಎಸ್‌ಟಿ ಸೇರಿ ₹ 42 ಲಕ್ಷ ಹಣ ಬರಬೇಕಾಗಿದೆ. ಖಾಲಿ ಜಾಗದ ನೆಲ ಬಾಡಿಗೆ ₹ 1.9 ಲಕ್ಷ ಬಾಕಿ ಇದೆ. ಜೊತೆಗೆ ಪುರಸಭೆಯ ಕಂದಾಯ, ತೆರಿಗೆ ಸೇರಿ ಒಟ್ಟು ₹ 5 ಲಕ್ಷ ಬರಬೇಕಾದಿದೆ.

ಕಂಪನಿಯ ಸಿಇಒ ನಿಶಾ ಅವರಿಗೆ ಹಲವು ಬಾರಿ ನೋಟಿಸ್‌ ನೀಡಿದರೂ ಬಾಡಿಗೆ ಹಾಗೂ ತೆರಿಗೆ ಹಣ ಪಾವತಿಸಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಕುರಿತು ಎಂದು ಸೆ.25ರಂದು ನಡೆದ ಟಿಎಪಿಸಿಎಂಎಸ್‌ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ADVERTISEMENT

‘ಗೋದಾಮು ಬಾಡಿಗೆ ಪಡೆಯುವಾಗ ₹ 20 ಲಕ್ಷ ಮಂಗಡ ಪಾವತಿಸಿದ್ದರು. ನಂತರ ಇಲ್ಲಿಯವರೆಗೂ ಯಾವುದೇ ಹಣ ಪಾವತಿಸಿಲ್ಲ. ಜೊತೆಗೆ ಗೋದಾಮು ಕಟ್ಟಡವನ್ನು ತೀವ್ರವಾಗಿ ಹಾನಿಗೊಳಿಸಿದ್ದಾರೆ, ಕರಾರು ಉಲ್ಲಂಘಿಸಿದ್ದಾರೆ. ಇದೆಲ್ಲದರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಟಿಎಪಿಸಿಎಂಎಸ್‌ ಉಪಾಧ್ಯಕ್ಷ ರಾಘವ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.