ADVERTISEMENT

ಅಣ್ಣೂರಿನಲ್ಲಿ ಚಿರತೆ ದಾಳಿ: ಮತ್ತೊಂದು ಮೇಕೆ ಬಲಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 13:50 IST
Last Updated 2 ಜುಲೈ 2025, 13:50 IST
ಭಾರತೀನಗರ ಸಮೀಪದ ಅಣ್ಣೂರು ಗ್ರಾಮದಲ್ಲಿ ಚಿರತೆ ದಾಳಿಗೆ ಮೇಕೆ ಬಲಿಯಾಗಿದೆ
ಭಾರತೀನಗರ ಸಮೀಪದ ಅಣ್ಣೂರು ಗ್ರಾಮದಲ್ಲಿ ಚಿರತೆ ದಾಳಿಗೆ ಮೇಕೆ ಬಲಿಯಾಗಿದೆ   

ಭಾರತೀನಗರ: ಸಮೀಪದ ಅಣ್ಣೂರು ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಮೇಕೆಯೊಂದನ್ನು ಕೊಂದು ಹಾಕಿದೆ.

ಗ್ರಾಮದ ಜ್ಯೋತಿ ಎಂಬುವರ ಮೇಕೆ ಬಲಿಯಾಗಿದೆ. ಈ ಹಿಂದೆ ಕೂಡ ಇವರ ಹಿಂಡಿನಲ್ಲಿದ್ದ, ಮಂಜುಳಾ ರಾಮಕೃಷ್ಣ ಎಂಬುವರ ಮೇಕೆಯನ್ನು ಚಿರತೆ ಕೊಂದು ಹಾಕಿತ್ತು. ಅಣ್ಣೂರು ಗ್ರಾಮದ ಹೊರವಲಯದಲ್ಲಿರುವ ಬಸವೇಶ್ವರನಗರದ ಬಳಿ ಕೂಡ ಎರಡು ಮೇಕೆಗಳನ್ನು ಕೊಂದಿತ್ತು. ಕಳೆದ ಒಂದು ತಿಂಗಳಲ್ಲಿ ಎರಡು ನಾಯಿಗಳು, 4 ಮೇಕೆಗಳನ್ನು ಚಿರತೆ ಕೊಂದಿದೆ.

ಚಿರತೆ ಸೆರೆ ಹಿಡಿಯಲು 15 ದಿನಗಳ ಹಿಂದೆ ಬೋನ್‌ ಕೂಡ ಇಡಲಾಗಿತ್ತು. ಇದುವರೆಗೂ ಚಿರತೆ ಸೆರೆ ಹಿಡಿಯಲು ಆಗಿಲ್ಲ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.