ಪಾಂಡವಪುರ: ತಾಲ್ಲೂಕಿನ ಹಿರೇಮರಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ಆಲೆಮನೆಯ ಬಳಿ ಕಟ್ಟಿಹಾಕಿದ್ದ ಕರು ಹಾಗೂ ಮೇಕೆಯ ಮೇಲೆ ದಾಳಿ ನಡೆಸಿದ ಚಿರತೆ ಹೊತ್ತೊಯ್ದಿde.
ಗ್ರಾಮದ ರೈತ ರಾಜೇಶ್ ಹಿರೇಮರಳಿ ಗ್ರಾಮದಿಂದ ಚಿಕ್ಕಮರಳಿ ಗ್ರಾಮಕ್ಕೆ ತೆರಳುವ ರಸ್ತೆ ಪಕ್ಕದ ಆಲೆಮನೆಯ ಬಳಿ ಕರು ಹಾಗೂ ಮೇಕೆಯನ್ನು ಕಟ್ಟಿಹಾಕಿದ್ದರು. ಕೆಲಸ ಮುಗಿಸಿ ಕಾರ್ಮಿಕರು ಹಾಗೂ ಮಾಲೀಕರು ಮನೆಯೊಳಗೆ ಮಲಗಿದ್ದ ವೇಳೆ ಚಿರತೆ ದಾಳಿ ನಡೆಸಿ, ಕರುವನ್ನು ಕೊಂದು ಹಾಕಿದೆ.
ಒಂದು ಕರುವಿನ ಕಳೇಬರ ಆಲೆಮನೆಯ ಬಳಿಯೇ ದೊರಕಿದ್ದು, ಮತ್ತೊಂದು ಕರುವನ್ನು ಸ್ವಲ್ಪ ದೂರದವರೆಗೆ ಎಳೆದೊಯ್ದು ಕಬ್ಬಿನ ಗದ್ದೆಯ ಬಳಿ ಬಿಟ್ಟುಹೋಗಿದೆ. ಮೇಕೆಯ ಕಳೆಬರಹ ಪತ್ತೆಯಾಗಿಲ್ಲ. ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಮುಂದಿನ ಕ್ರಮಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.