ADVERTISEMENT

ಮಂಡ್ಯ | ಕಬ್ಬಿನಗದ್ದೆಯಲ್ಲಿ ಕಂಡ 3 ಚಿರತೆ ಮರಿಗಳು

​ಪ್ರಜಾವಾಣಿ ವಾರ್ತೆ
Published 16 ಮೇ 2020, 16:56 IST
Last Updated 16 ಮೇ 2020, 16:56 IST
ಶ್ರೀರಂಗಪಟ್ಟಣ ತಾಲ್ಲೂಕು ಆಲಗೂಡು ಬಳಿ ಕಬ್ಬಿನ ಗದ್ದೆಯಲ್ಲಿ ಕಾಣಿಸಿಕೊಂಡ ಚಿರತೆ ಮರಿಗಳು
ಶ್ರೀರಂಗಪಟ್ಟಣ ತಾಲ್ಲೂಕು ಆಲಗೂಡು ಬಳಿ ಕಬ್ಬಿನ ಗದ್ದೆಯಲ್ಲಿ ಕಾಣಿಸಿಕೊಂಡ ಚಿರತೆ ಮರಿಗಳು   

ಶ್ರೀರಂಗಪಟ್ಟಣ: ತಾಲ್ಲೂಕಿನ ಆಲಗೂಡು ಗ್ರಾಮದ ಬಳಿ,ಕೃಷ್ಣೇಗೌಡ ಎಂಬುವವರ ಕಬ್ಬಿನ ಗದ್ದೆಯಲ್ಲಿ ಶನಿವಾರ ಮೂರು ಚಿರತೆ ಮರಿಗಳು ಕಾಣಿಸಿಕೊಂಡಿವೆ.

ಕಬ್ಬು ಕಡಿಯುವ ವೇಳೆ, ಇನ್ನೂ ಕಣ್ಣು ಬಿಡದ ಚಿರತೆ ಮರಿಗಳು ಸಿಕ್ಕಿವೆ. ಕುತೂಹದಿಂದ ಜನರು ಚಿರತೆ ಮರಿಗಳನ್ನು ಮುಟ್ಟಿ ಪುಳಕಿತರಾದರು. ಕೆಲವರು ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು.

‘ಏಳೆಂಟು ದಿನಗಳ ಈಚೆಗೆ ಜನಿಸಿರುವ ಮರಿಗಳಿವು. ಜನರು ಸೇರಿದ್ದರಿಂದ ಗಾಬರಿಗೊಂಡಿವೆ. ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಅವು ಕಂಡುಬಂದಿದ್ದ ಸ್ಥಳದಲ್ಲೇ ಬಿಡುವಂತೆ ಸೂಚಿಸಿದ್ದು, ಅದರಂತೆ ಕ್ರಮಕೈಗೊಂಡಿದ್ದೇವೆ ’ ಎಂದು ಉಪ ವಲಯ ಅರಣ್ಯಾಧಿಕಾರಿ ಆನಂದೇಗೌಡ ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.