ADVERTISEMENT

ಮಳವಳ್ಳಿ: ಗಂಗಾ ಪರಮೇಶ್ವರಿ ಸಹಕಾರ ಸಂಘಕ್ಕೆ ರಘು ಕುಮಾರ್ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 7 ಮೇ 2025, 12:50 IST
Last Updated 7 ಮೇ 2025, 12:50 IST
ಮಳವಳ್ಳಿ ಪಟ್ಟಣದ ಗಂಗಾ ಪರಮೇಶ್ವರಿ ಸಹಕಾರ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ಮೈತ್ರಿಕೂಟ ಬೆಂಬಲಿತ ಎಂ.ರಘು ಕುಮಾರ್ ಹಾಗೂ ಶಿವಕುಮಾರ್ ಅವರನ್ನು ಮುಖಂಡರು ಅಭಿನಂದಿಸಿದರು
ಮಳವಳ್ಳಿ ಪಟ್ಟಣದ ಗಂಗಾ ಪರಮೇಶ್ವರಿ ಸಹಕಾರ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ಮೈತ್ರಿಕೂಟ ಬೆಂಬಲಿತ ಎಂ.ರಘು ಕುಮಾರ್ ಹಾಗೂ ಶಿವಕುಮಾರ್ ಅವರನ್ನು ಮುಖಂಡರು ಅಭಿನಂದಿಸಿದರು   

ಮಳವಳ್ಳಿ: ಪಟ್ಟಣದ ಗಂಗಾ ಪರಮೇಶ್ವರಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮೈತ್ರಿಕೂಟ ಬೆಂಬಲಿತ ಎಂ.ರಘು ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಶಿವಕುಮಾರ್ ಆಯ್ಕೆಯಾದರು.

ಸಂಘದ ಸಭಾಂಗಣದಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಂ.ರಘು ಕುಮಾರ್ ಹಾಗೂ ಶ್ವೇತಾ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಶಿವಕುಮಾರ್ ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶ್ವೇತಾ ಗೈರಾಗಿದ್ದರು. ಎಂ.ರಘು ಕುಮಾರ್ 7 ಮತ ಪಡೆದ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷ ಶಿವಕುಮಾರ್ ಅವಿರೋಧ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಸುಧಾಕರ್ ಘೋಷಿಸಿದರು.

ಐವರು ಪಕ್ಷೇತರ ನಿರ್ದೇಶಕರ ಮೈತ್ರಿಕೂಟವನ್ನು ಜೆಡಿಎಸ್-ಬಿಜೆಪಿಯ ತಲಾ ಒಬ್ಬರು ನಿರ್ದೇಶಕರು ಬೆಂಬಲಿಸಿದರು.

ADVERTISEMENT

ಎಂ.ರಘು ಕುಮಾರ್ ಮಾತನಾಡಿ, ‘ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸಿ ಬಿಜೆಪಿ-ಜೆಡಿಎಸ್ ಪಕ್ಷದವರಿಗೂ ಅಭಾರಿಯಾಗಿರುತ್ತೇವೆ’ ಎಂದು ಹೇಳಿದರು.

ಉಪಾಧ್ಯಕ್ಷ ಶಿವಕುಮಾರ್, ಜೆಡಿಎಸ್‌ನ ಕಂಬರಾಜು ಮಾತನಾಡಿದರು. ಪುರಸಭೆ ಸದಸ್ಯ ನಾಗೇಶ್, ನಿರ್ದೇಶಕರಾದ ಕಂಬರಾಜು, ಎಂ.ಆರ್.ಪ್ರಸಾದ್, ಮೊಗಣ್ಣ, ಗುರುಸಿದ್ದಯ್ಯ, ಪೂರ್ಣೀಮಾ, ಮುಖಂಡರಾದ ನಾರಾಯಣ, ಆಟೋ ಮಂಜಣ್ಣ, ದೇವರಾಜು, ವೇಣು, ಪ್ರಭು, ಮಾದೇಶ್, ಸ್ವಾಮಿ, ಚಂದ್ರು, ರಾಜಣ್ಣ, ಪ್ರಕಾಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.