ADVERTISEMENT

ಭಕ್ತ ಸಾಗರದ ನಡುವೆ ನಡೆದ ಮದ್ದೂರಮ್ಮ ಕೊಂಡೋತ್ಸವ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 13:09 IST
Last Updated 16 ಏಪ್ರಿಲ್ 2025, 13:09 IST
ಮದ್ದೂರಿನಲ್ಲಿ ಗ್ರಾಮದೇವತೆ ಮದ್ದೂರಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಮುಂಜಾನೆ ಕೊಂಡೋತ್ಸವವು ಅದ್ಧೂರಿಯಾಗಿ ನೆರವೇರಿತು
ಮದ್ದೂರಿನಲ್ಲಿ ಗ್ರಾಮದೇವತೆ ಮದ್ದೂರಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಮುಂಜಾನೆ ಕೊಂಡೋತ್ಸವವು ಅದ್ಧೂರಿಯಾಗಿ ನೆರವೇರಿತು   

ಮದ್ದೂರು: ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಮುಂಜಾನೆ ಮದ್ದೂರಿನ ಗ್ರಾಮದೇವತೆ ಮದ್ದೂರಮ್ಮ  ಕೊಂಡೋತ್ಸವವು ಅದ್ದೂರಿಯಾಗಿ ನೆರವೇರಿತು.

ಕೊಂಡೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಬಂಡಿ ಉತ್ಸವ ನಡೆಸಿ ಕೊಂಡಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು, ಬುಧವಾರ ಮುಂಜಾನೆ ಶ್ರವಣ ನಕ್ಷತ್ರ, ಬ್ರಾಹ್ಮೀ ಮುಹೂರ್ತದಲ್ಲಿ ಕೊಂಡೋತ್ಸವ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಶಿವಣ್ಣ ಕೊಂಡೋತ್ಸವ ನಡೆಸಿಕೊಟ್ಟರು.

ಕೊಂಡೋತ್ಸವ ನೋಡಲು ಪಟ್ಟಣದ, ಜಿಲ್ಲೆಯ ಹಾಗೂ ರಾಜ್ಯದ ಹಲವು ಕಡೆಗಳಿಂದ ಸಾವಿರಾರು ಜನತೆ ಆಗಮಿಸಿದ್ದರು. ಸಂಜೆ 4.30ರ ನಂತರ ಮಹಿಳೆಯರಿಂದ ಹಾಲರವಿ ಸೇವೆ ನಡೆಸಲಾಯಿತು.

ADVERTISEMENT

ದೇವಸ್ಥಾನದ ಗರ್ಭಗುಡಿ, ದೇವಿಯವರ ವಿಗ್ರಹ ಹಾಗೂ ದೇವಸ್ಥಾನಕ್ಕೆ ವಿಶೇಷ ಹೂವಿನ ಅಲಂಕಾರ ಹಾಗೂ ಆವರಣದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಬೆಳಿಗ್ಗೆ ದೇವಿಯರ ವಿಗ್ರಹಕ್ಕೆ ಅಭಿಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.

ಮದ್ದೂರಿನಲ್ಲಿ ಗ್ರಾಮದೇವತೆ ಮದ್ದೂರಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಮುಂಜಾನೆ ಕೊಂಡೋತ್ಸವವು ಅದ್ಧೂರಿಯಾಗಿ ನೆರವೇರಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.