ADVERTISEMENT

ಕ್ರಿಮಿನಾಶಕ ಮಾತ್ರೆ ಸೇವಿಸಿ ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 13:09 IST
Last Updated 26 ಜೂನ್ 2025, 13:09 IST
ಮಹದೇವ (55)
ಮಹದೇವ (55)   

ಬೆಳಕವಾಡಿ: ಸಮೀಪದ ಅಂತರಾಯನಪುರ ದೊಡ್ಡಿ ಗ್ರಾಮದ ಎ.ಎಂ.ಮಹದೇವ (55) ಎಂಬುವವರು ಹೊಟ್ಟೆನೋವು ತಾಳಲಾರದೆ ಆಕಸ್ಮಿಕವಾಗಿ ಕ್ರಿಮಿನಾಶಕ ಮಾತ್ರೆ ಸೇವಿಸಿ ಬುಧವಾರ ಮೃತಪಟ್ಟಿದ್ದಾರೆ.

ಮಹದೇವ ಬೆಳಿಗ್ಗೆ ಮದ್ಯಪಾನ ಮಾಡಿ ಹೊಟ್ಟೆನೋವು ತಾಳಲಾರದೇ ಹೊಟ್ಟೆನೋವಿನ ಮಾತ್ರೆಗಳೆಂದು ತಿಳಿದು ಆಕಸ್ಮಿಕವಾಗಿ ಮನೆಯಲ್ಲಿ ಕಾಳುಗಳಿಗೆ ಹಾಕಲು ತಂದಿಟ್ಟದ್ದ ಕ್ರಿಮಿನಾಶಕ ಗುಳಿಗೆಗಳನ್ನು ತೆಗೆದುಕೊಂಡಿದ್ದು, ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಮೃತರ ಪತ್ನಿ ಸುಧಾಮಣಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT