ADVERTISEMENT

ದಾಂಪತ್ಯ ಜೀವನಕ್ಕೆ ಕಾಲಿಟ್ಟ 20 ಜೋಡಿ

ಚಿಕ್ಕರಸಿನಕೆರೆ ಗ್ರಾಮದಲ್ಲಿ ನಡೆದ ಸಾಮೂಹಿಕ ವಿವಾಹ; ತ್ರಿಸರಣ, ಪಂಚಶೀಲ ಬೋಧನೆ

​ಪ್ರಜಾವಾಣಿ ವಾರ್ತೆ
Published 26 ಮೇ 2019, 17:02 IST
Last Updated 26 ಮೇ 2019, 17:02 IST
ಮೆರವಣಿಗೆಯಲ್ಲಿ ಬುದ್ಧ, ಬಸವ, ಅಂಬೇಡ್ಕರ್‌ ವೇಷಧಾರಿಗಳು ಗಮನ ಸೆಳೆದರು
ಮೆರವಣಿಗೆಯಲ್ಲಿ ಬುದ್ಧ, ಬಸವ, ಅಂಬೇಡ್ಕರ್‌ ವೇಷಧಾರಿಗಳು ಗಮನ ಸೆಳೆದರು   

ಭಾರತೀನಗರ: ಸಮೀಪದ ಚಿಕ್ಕರಸಿನ ಕೆರೆ ಗ್ರಾಮದ ಕಾಲಭೈರವೇಶ್ವರ ದೇವಾಲಯದ ಆವರಣದಲ್ಲಿ ಜೈ ಭೀಮ್ ದಲಿತ ಜಾಗೃತಿ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮದಲ್ಲಿ 20 ಜೋಡಿಗಳು ದಾಂಪತ್ಯ ಜೀವನಕ್ಕೆಕಾಲಿಟ್ಟರು.

ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರದ ಭಂತೇಜಿ ಕಲ್ಯಾಣ ಸಿರಿ ಅವರು ಬೌದ್ಧ ಧರ್ಮದ ತ್ರಿಸರಣ ಹಾಗೂ ಪಂಚಶೀಲಗಳನ್ನು ವಧು– ವರರಿಗೆ ಬೋಧಿಸಿದರು.

ಪತಿ, ಪತ್ನಿಯರು ಸಾಮರಸ್ಯ ಜೀವನ ನಡೆಸಬೇಕು. ಕುಟುಂಬ ಎಂಬ ವಾಹನದಲ್ಲಿ ಎರಡೂ ಚಕ್ರಗಳು ಕೂಡ ಸಮಾನವಾಗಿ ಚಲಿಸಬೇಕು. ಯಾವುದೇ ಚಕ್ರ ಏರುಪೇರಾದರೂ ಸಂಸಾರ ತೂತು ಬಿದ್ದ ಹಡಗಿನಂತಾಗುತ್ತದೆ. ಇಲ್ಲಿ ಯಾರೂ ಹೆಚ್ಚಲ್ಲ. ಯಾರೂ ಕಡಿಮೆಯೂ ಅಲ್ಲ ಎಂದರು.

ADVERTISEMENT

ಆದಿಚುಂಚನಗಿರಿ ಮಠದ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ಮಾತನಾಡಿ, ‘ಮದುವೆ ಎಂಬುದು ಗಂಡು, ಹೆಣ್ಣಿನ ಅನುಬಂಧ. ನನಗೆ ನೀನು, ನಿನಗೆ ನಾನು ಎಂಬಂತಿದ್ದರೆ ಮಾತ್ರ ಸಂಸಾರ. ಗಂಡು ಹೆಣ್ಣುಗಳು ಪರಸ್ಪರ ಸಾಮರಸ್ಯದಿಂದ ಬದುಕಿದರೆ ಬದುಕಿನಲ್ಲಿ ನೆಮ್ಮದಿ ಇರುತ್ತದೆ’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ, ‘ನೈತಿಕ ಜೀವನ ನಡೆಸುವುದು ಬಹಳ ದುಸ್ತರ. ಬುದ್ಧ ನೈತಿಕ ಜೀವನದ ದಾರಿ ತೋರಿಸಿದ್ದಾನೆ. ಆ ದಾರಿಯಲ್ಲಿ ನಡೆದರೆ ನೆಮ್ಮದಿಯ ಬದುಕು ಕಾಣಬಹುದು’ ಎಂದು ಅವರು ತಿಳಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮಧು ಜಿ. ಮಾದೇಗೌಡ, ಭಗವಾನ್ ಬುದ್ಧ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಯಮದೂರು ಸಿದ್ದರಾಜು, ಜಿಲ್ಲಾ ಪಂಚಾಯಿತಿ ಸದಸ್ಯ ಎ.ಎಸ್. ರಾಜೀವ, ಸಾಹಿತಿ ಪ್ರೊ. ಮಾಯೀಗೌಡ, ಕಾಲಭೈರವೇಶ್ವರ ದೇವಾಲಯ ಟ್ರಸ್ಟ್ ಅಧ್ಯಕ್ಷ ಜೋಗೀಗೌಡ, ಕಾರ್ಯದರ್ಶಿ ಶಿವಲಿಂಗೇಗೌಡ, ಪ್ರೊ. ಬಿಳೀಗೌಡ, ಕೆ.ಎಲ್.ಗೌಡ, ಆತಗೂರು ವೆಂಕಟಾಚಲಯ್ಯ, ಇಇ ಚಂದ್ರಹಾಸ, ನಂಜುಂಡಸ್ವಾಮಿ, ಅಧ್ಯಕ್ಷ ಚಿಕ್ಕರಸಿನಕೆರೆ ಸಿ. ಶಿವಲಿಂಗಯ್ಯ, ಜಾಣಪ್ಪ, ದೊಡ್ಡರಸಿನಕೆರೆ ಮಹೇಂದ್ರ, ಕಾಡುಕೊತ್ತನಹಳ್ಳಿ ರುದ್ರಕುಮಾರ ಪಾಲ್ಗೊಂಡಿದ್ದರು.

ಗಮನ ಸೆಳೆದ ಅಂಬೇಡ್ಕರ್ ವೇಷಧಾರಿ: ಬೆಂಗಳೂರು ಬಿಎಚ್ಇಎಲ್ ನಿವೃತ್ತ ನೌಕರ ಪಿ. ವೇಣುಗೋಪಾಲ್ ಅವರು ಅಂಬೇಡ್ಕರ್ ವೇಷಧಾರಿಯಾಗಿ ಸಭಿಕರ ಗಮನ ಸೆಳೆದರು. ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಗ್ರಾಮದ ನಿವಾಸಿ, ಕೆಐಎಡಿಬಿ ನೌಕರ ಶಿವಸ್ವಾಮಿ ಅವರ ಪುತ್ರರಾದ ರಮಿತ್ ಹಾಗೂ ಯಶಸ್ ಬುದ್ಧ, ಬಸವಣ್ಣನ ವೇಷ ಧರಿಸಿದ್ದರು.

ದಲಿತ ಯುವತಿ, ಬ್ರಾಹ್ಮಣ ಯುವಕನ ಮದುವೆ
ಆಂಧ್ರಪ್ರದೇಶದ ತಿರುಪತಿಯ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಹೇಮಂತ್ ಕುಮಾರ್‌ ಮಳವಳ್ಳಿ ತಾಲ್ಲೂಕಿನ ಸಸಿಯಾಲಪುರದ ದಲಿತ ಸಮುದಾಯಕ್ಕೆ ಸೇರಿದ ಸೌಮ್ಯಾ ಎಂಬುವರನ್ನು ವರಿಸಿದ್ದು ಗಮನ ಸೆಳೆಯಿತು.

ಗಮನ ಸೆಳೆದ ಅಂಬೇಡ್ಕರ್ ವೇಷಧಾರಿ
ಬೆಂಗಳೂರು ಬಿಎಚ್ಇಎಲ್ ನಿವೃತ್ತ ನೌಕರ ಪಿ. ವೇಣುಗೋಪಾಲ್ ಅವರು ಅಂಬೇಡ್ಕರ್ ವೇಷಧಾರಿಯಾಗಿ ಸಭಿಕರ ಗಮನ ಸೆಳೆದರು. ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಗ್ರಾಮದ ನಿವಾಸಿ, ಕೆಐಎಡಿಬಿ ನೌಕರ ಶಿವಸ್ವಾಮಿ ಅವರ ಪುತ್ರರಾದ ರಮಿತ್ ಹಾಗೂ ಯಶಸ್ ಬುದ್ಧ, ಬಸವಣ್ಣನ ವೇಷ ಧರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.