ADVERTISEMENT

ಟಿಪ್ಪು ಮಸೀದಿಯಲ್ಲಿ ಆಂಜನೇಯನ ಪೂಜೆಗೆ ಅವಕಾಶ ನೀಡಿಬೇಕೆಂದು ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಮೇ 2022, 12:54 IST
Last Updated 13 ಮೇ 2022, 12:54 IST

ಮಂಡ್ಯ: ಶ್ರೀರಂಗಪಟ್ಟಣದ ಟಿಪ್ಪು ಮಸೀದಿ ಮೂಲತಃ ಹನುಮಂತ ದೇವಾಲಯವಾಗಿತ್ತು, ಇದನ್ನು ಪರಿಗಣಿಸಿ ಅಲ್ಲಿ ಆಂಜನೇಯನ ಪೂಜೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ನರೇಂದ್ರ ಮೋದಿ ವಿಚಾರ ಮಂಚ್‌ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಸ್‌.ಅಶ್ವತಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಮೂಡಲಬಾಗಿಲು ಆಂಜನೇಯನ ದೇವಾಲಯವನ್ನು ಟಿಪ್ಪು ಸುಲ್ತಾನ್‌ ಧ್ವಂಸ ಮಾಡಿ ಅಲ್ಲಿ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ. ಇದಕ್ಕೆ ದೇವಾಲಯದ ಗೋಡೆಗಳು, ಕಂಬಗಳಲ್ಲೇ ಸಾಕಷ್ಟು ಕುರುಹುಗಳಿವೆ. ಅಲ್ಲದೇ ಲೂಯಿಸ್‌ ರೈಸ್‌ ಅವರ ಮೈಸೂರು ಗೆಜೆಟಿಯರ್‌, ಮೈಸೂರು ಅರಮನೆ ನಡಾವಳಿ, ಟಿಪ್ಪು ಸುಲ್ತಾನ್‌ ಪರ್ಷಿಯಾದ ಖಲೀಫರಿಗೆ ಬರದ ಪತ್ರಗಳಲ್ಲೂ ಈ ಬಗ್ಗೆ ಸಾಕ್ಷ್ಯಗಳಿವೆ.

ಜಿಲ್ಲಾಡಳಿತವು ಪರಾತತ್ವ ಇಲಾಖೆ ಕಡೆಯಿಂದ ಈ ಬಗ್ಗೆ ಪರಿಶೀಲನೆ ನಡೆಸಬೇಕು. ಬಹುಸಂಖ್ಯಾತ ಹಿಂದೂಗಳ ಆರಾಧ್ಯ ದೈವ ಆಂಜನೇಯನ ಪೂಜೆಗೆ ಅವಕಾಶ ನೀಡಬೇಕು ಎಂದು ವಿಚಾರ ಮಂಚ್‌ ರಾಜ್ಯ ಘಟಕದ ಕಾರ್ಯದರ್ಶಿ ಸಿ.ಟಿ.ಮಂಜುನಾಥ್‌, ಪದಾಧಿಕಾರಿಗಳಾದ ಹೊಸಹಳ್ಳಿ ಶಿವು, ಎಚ್‌.ಕೆ.ಮಂಜುನಾಥ್‌ ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.